30.22 ಗ್ರಾಂ ಎಂಡಿಎಂಎ ವಶ: ಸ್ಕೂಟರ್ ಸಹಿತ ಓರ್ವ ಸೆರೆ

ಕಾಸರಗೋಡು: ಕಾಸರ ಗೋಡು ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸಲಾಗುತ್ತಿದ್ದ ಭಾರೀ ಮಾದಕದ್ರವ್ಯವಾದ 30.22 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮುಳಿಯಾರು ಮಾಸ್ತಿಕುಂಡ್ ನಿವಾಸಿ ಅಶ್ರಫ್ ಅಹಮ್ಮದ್ ಅಬ್ದುಲ್ಲಾ ಶೇಖ್ (44) ಎಂಬಾತನನ್ನು ಸ್ಕೂಟರ್ ಸಹಿತ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಪೊಲೀಸರ ನಿನ್ನೆ ರಾತ್ರಿ ಕೂಡ್ಲು ರಾಮದಾಸನಗರ ಸಮೀಪ ಪಾರೆಕಟ್ಟೆ ತಿರುವು ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಆ ವೇಳೆ ಆರೋಪಿ ತಾತ್ಕಾಲಿಕ ನೋಂದಾವಣೆ ನಂಬ್ರ ಪ್ಲೇಟ್ ಲಗತ್ತಿಸಿದ ಸ್ಕೂಟರಿನಲ್ಲಿ ಕಾಸರಗೋಡು ಭಾಗದಿಂದ ಬರುತ್ತಿದ್ದ. ಆಗ ಪೊಲೀಸರು ಆತನನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಆತನ ಕೈವಶವಿದ್ದ ಎಂಡಿಎಂಎ ಪತ್ತೆಯಾಗಿದೆ.

RELATED NEWS

You cannot copy contents of this page