ಪತ್ನಿ, ಮೂವರು ಮಕ್ಕಳಿರುವ ಯುವಕನೊಂದಿಗೆ ತೆರಳಿದ 19ರ ಹರೆಯದ ನರ್ಸಿಂಗ್ ಟ್ರೈನಿ

ಮುಳ್ಳೇರಿಯ: ಪತ್ನಿ ಹಾಗೂ ಮೂವರು ಮಕ್ಕಳಿರುವ ಯುವಕನ ಜೊತೆ 19ರ ಹರೆಯದ ಯುವತಿ ಪರಾರಿಯಾದ ಬಳಿಕ ಪೊಲೀಸರನ್ನು ವಿವಿಧೆಡೆ ಸುತ್ತಾಡಿಸಿ ಬೇಸ್ತುಬೀಳಿಸಿದ ಘಟನೆಯೊಂದು ನಡೆದಿದೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಟೆಕಲ್ಲು ನಿವಾಸಿ ಯುವಕ ಹಾಗೂ ಅದೂರು ನಿವಾಸಿಯೂ, ನರ್ಸಿಂಗ್ ಟ್ರೈನಿಯಾದ ಯುವತಿ ಎರಡು ದಿನಗಳ  ಹಿಂದೆ ಪರಾರಿಯಾಗಿ ದ್ದರೆನ್ನಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಅವರ ಪತ್ತೆಗಾಗಿ ಪೊಲೀಸರು ವಿವಿಧೆಡೆ ಅಲೆದಾಡ ಬೇಕಾಯಿತು. ಈ ವೇಳೆ ಜೋಡಿ ಯುವಕನ ಸಂಬಂಧಿಕರ ಮನೆಯಲ್ಲಿ ರುವುದಾಗಿ ತಿಳಿದುಬಂತು. ಇದರಂತೆ ಅಲ್ಲಿಗೆ ತೆರಳಿದ ಪೊಲೀಸರು ಜೋಡಿಯನ್ನು ಪತ್ತೆಹಚ್ಚಿ ಪೊಲೀಸ್ ಠಾಣೆಗೆ ತಲುಪಿಸಿದರೂ ಈ ವೇಳೆ ಯುವತಿ ಪ್ರಿಯತಮನೊಂದಿಗೆ ತೆರಳುವುದಾಗಿ ಹಠ ಹಿಡಿದಿದ್ದಾಳೆ. ಇದರಿಂದ ಪೊಲೀಸರು ಯುವತಿಯ ಹೆತ್ತವರನ್ನು ಠಾಣೆಗೆ ಕರೆಸಿದರು. ಹೆತ್ತವರ ಮುಂದೆಯೂ ಯುವತಿ ತನ್ನ ನಿರ್ಧಾರವನ್ನು ಪುನರಾವರ್ತಿಸಿದ್ದಾಳೆ. ಈ ಬಗ್ಗೆ ಪೊಲೀಸರು ಯುವಕನನ್ನು ವಿಚಾರಿಸಿದಾಗ ತನ್ನ ಪತ್ನಿಯ ಒಪ್ಪಿಗೆಯೊಂದಿಗೆ ತಾನು ಯುವತಿ ಯನ್ನು ಮದುವೆಯಾಗುವುದಾಗಿ ತಿಳಿಸಿದ್ದನು.

ತಮ್ಮ ಸಂಪ್ರದಾಯ ಪ್ರಕಾರ ಯುವಕನಿಗೆ ಎರಡು ಅಥವಾ ಮೂರು ಮದುವೆಯಾಗುವುದರಲ್ಲಿ ಅಡ್ಡಿಯಿಲ್ಲ ವೆಂದು ಯುವತಿಯೂ ತಿಳಿಸಿದಳು. ಕೊನೆಗೆ ಆಕೆಯ ಹೆತ್ತವರಲ್ಲಿ ಪೊಲೀ ಸರು ಅಭಿಪ್ರಾಯ ಕೇಳಿದಾಗ ಆಕೆ ಪ್ರಿಯತಮನ ಜೊತೆ ತೆರಳುವುದಾದಲ್ಲಿ ನಮ್ಮ ವಿರೋಧವಿಲ್ಲವೆಂದು ತಿಳಿಸಿದರು. ಹಾಗಾದರೆ ಆ ಬಗ್ಗೆ ಅನುಮತಿಪತ್ರ ಬರೆದು ನೀಡುವಂತೆ ಪೊಲೀಸರು ತಿಳಿಸಿದ್ದು, ಅದರಂತೆ ಯುವತಿಯ ಹೆತ್ತವರು ಅನುಮತಿ ಪತ್ರವನ್ನು ನೀಡಿದರು. ಇದೇ ವೇಳೆ ಮುಂದಿನ ದಿನಗಳಲ್ಲಿ  ಯುವಕನ ಬಗ್ಗೆ ದೂರುಗಳೊಂದಿಗೆ ಬರಕೂಡದು ಎಂದೂ ಪೊಲೀಸರು ಮುನ್ನೆಚ್ಚರಿಕೆ ನೀಡಿದರು. ಬಳಿಕ ಅವರು ಸಂತೋಷ ದಿಂದಲೇ ಅಲ್ಲಿಂದ ಮರಳಿದ್ದು, ಅಷ್ಟರಲ್ಲಿ ಪ್ರೇಮ ಪ್ರಕರಣವೊಂದು ಸುಖಾಂತ್ಯಗೊಂಡಿತು. 

Leave a Reply

Your email address will not be published. Required fields are marked *

You cannot copy content of this page