ಬೇಕೂರಿನಲ್ಲಿ ಪೈಪ್ ಬಿರುಕುಬಿಟ್ಟು ಕುಡಿಯುವ ನೀರು ಪೋಲು: ಅಧಿಕಾರಿಗಳು ಮೌನ ಆರೋಪ
ಉಪ್ಪಳ: ಅಧಿಕಾರಿಗಳ ಕಣ್ಮುಂ ದೆಯೇ ವ್ಯಾಪಕ ಕುಡಿಯುವ ನೀರು ಪೋಲಾಗುತ್ತಿದ್ದರೂ ಪೈಪ್ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಊರವರು ಆರೋಪಿಸಿದ್ದಾರೆ. ಬೇಕೂರು ಮರದ ಮಿಲ್ ಬಳಿಯ ರಸ್ತೆ ಬದಿಯಲ್ಲಿ ಕಳೆದ ಹಲವು ತಿಂಗಳಿಂದ ನೀರು ಪೋಲಾಗುತ್ತಿದೆ. ಸಮೀಪದಲ್ಲೇ ಇರುವ ಕುಡಿಯುವ ನೀರು ವಿತರಣೆ ಕೇಂದ್ರದಿಂದ ವಿತರಿಸಲಾಗುವ ನೀರು ಪೋಲಾಗುತ್ತಿದೆ. ಪೈಪ್ ದುರಸ್ತಿಗೊಳಿ ಸಲು ಸ್ಥಳೀಯರು ಹಲವು ಬಾರಿ ತಿಳಿಸಿದರೂ ಇದುವರೆಗೂ ಕ್ರಮ ಕೈಗೊಳ್ಳದಿರುವುದು ಸ್ಥಳೀಯರಲ್ಲಿ ಆಕ್ರೋಶವನ್ನುಂಟುಮಾಡಿದೆ. ಇಲ್ಲಿ ನೀರು ಹರಿದು ಮಣ್ಣಿನ ರಸ್ತೆ ಶೋಚನೀಯಾವಸ್ಥೆಗೆ ತಲುಪಿದ್ದು, ಸ್ಥಳೀಯರ ಸಂಚಾರಕ್ಕೆ ಸಮಸ್ಯೆ ಯಾಗಿರುವುದಾಗಿ ದೂರಲಾಗಿದೆ. ಇದೇ ರೀತಿ ನೀರು ಪೋಲು ಆದರೆ ಮುಂದೆ ನೀರಿಗಾಗಿ ಪರದಾಟ ಮಾಡ ಬೇಕಾದ ಅವಸ್ಥೆ ಬರಬಹುದೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಕೂಡಲೇ ಅಧಿಕಾರಿಗಳು ಪೈಪ್ ದುರಸ್ತಿಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.