ಕುಟುಂಬಶ್ರೀ ಆಡಳಿತ ಸಮಿತಿ ಕಾಲಾವಧಿ ಒಂದು ವರ್ಷ ವಿಸ್ತರಣೆ
ಕಾಸರಗೋಡು: ಕುಟುಂಬಶ್ರೀ ಆಡಳಿತ ಸಮಿತಿಗಳ ಮೂರು ವರ್ಷ ಕಾಲಾವಧಿಯನ್ನು 2026 ಜನವರಿ 25ರವರೆಗೆ ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದೆ. 2025 ಜನವರಿ 25ರಂದು ಕಾಲಾವಧಿ ಕೊನೆಗೊಳ್ಳ ಬೇಕಿತ್ತು. ಸ್ಥಳೀಯಾಡಳಿತ ಚುನಾ ವಣೆಯ ಪೂರ್ವಭಾವಿಯಾಗಿ ವಾರ್ಡ್ ವಿಭಜನೆ ನಡೆಯುವುದರಿಂದ ಕುಟುಂಬಶ್ರೀ ಸಮಿತಿಗಳ ಕಾಲಾವಧಿ ವಿಸ್ತರಿಸಲು ನಿರ್ಧರಿಸಲಾಗಿದೆ. ನೆರೆಕರೆ ಕೂಟಗಳು, ವಾರ್ಡ್ ಆಧಾರದಲ್ಲಿರುವ ಏರಿಯ ಡೆವಲಪ್‌ಮೆಂಟ್ ಸೊಸೈಟಿ ಗಳು (ಎಡಿಎಸ್), ಸ್ಥಳೀಯಾಡಳಿತ ಸಂಸ್ಥೆಗಳ ಆಧಾರದಲ್ಲಿರುವ ಕಮ್ಯೂನಿಟಿ ಡೆವಲಪ್‌ಮೆಂಟ್ ಸೊಸೈಟಿಗಳು (ಸಿಡಿಎಸ್) ಎಂಬೀ ರೀತಿಯಲ್ಲಿ ಮೂರು ಮಟ್ಟಗಳು ಕುಟುಂಬಶ್ರೀಯಲ್ಲಿದೆ.