ಕರ್ನಾಟಕ ಮದ್ಯ ಪತ್ತೆ

ಕಾಸರಗೋಡು: ನಗರದ ನುಳ್ಳಿಪ್ಪಾಡಿಯಲ್ಲಿ ಕಾಸರಗೋಡು ಎಕ್ಸೈಸ್ ರೇಂಜ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ರಂಜಿತ್  ಕೆ.ವಿ. ಯವರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ ಕರ್ನಾಟಕ ನಿರ್ಮಿತ 180 ಎಂ.ಎಲ್‌ನ 16 ಪ್ಯಾಕೆಟ್ (2.88 ಲೀಟರ್) ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಇದಕ್ಕೆ  ಸಂಬಂಧಿಸಿ ಹರಿ ಪ್ರಸಾದ್ (31) ಎಂಬಾತನ ವಿರುದ್ಧ ಪ್ರಕರಣ ದಾಖಲಿಸ ಲಾಗಿದೆ. ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿಇಒ ಗಳಾದ ಪ್ರಶಾಂತ್ ಕುಮಾರ್ ಎ.ವಿ, ಅಮಲ್‌ಜಿತ್ ಸಿ.ಎಂ ಮತ್ತು ನಿಧೀಶ್ ಕೆ. ಎಂಬವರು ಒಳಗೊಂಡಿದ್ದರು.

You cannot copy contents of this page