ಕಯ್ಯಾರು ಚರ್ಚ್‌ನಲ್ಲಿ ಸಂಭ್ರಮದ ಕ್ರಿಸ್ಮಸ್
ಕಯ್ಯಾರು: ಜಿಲ್ಲೆಯಲ್ಲಿ ಕ್ರೈಸ್ತಬಾಂಧ ವರು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಕಯ್ಯಾರು ಕ್ರಿಸ್ತರಾಜ ಇಗರ್ಜಿಯಲ್ಲಿ ನಡೆದ ಬಲಿ ಪೂಜೆಯನ್ನು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಆಡಳಿತಾ ಧಿಕಾರಿ ಫಾ| ಅಜಿತ್ ಮಿನೇಜಸ್ ನೆರವೇರಿ ಸಿದರು. ಝಾರ್ಖಂಡ್ ರಾಂಚಿ ಸೆಮಿನರಿಯ ನಿರ್ದೇಶಕ ಫಾ| ಜೋನ್ ಕ್ರಾಸ್ತ, ಫಾ| ಜೋಸ್ವಿನ್ ಡಿಸೋಜಾ ಹಾಗೂ ಕಯ್ಯಾರು ಚರ್ಚ್‌ನ ಧರ್ಮಗುರು ಫಾ| ವಿಶಾಲ್ ಮೋನಿಸ್ ಉಪಸ್ಥಿತರಿದ್ದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರಗಿತು.