ಕಾಂಗ್ರೆಸ್ ಮುಖಂಡ ನಿಧನ
ಕಾಸರಗೋಡು: ಹಿರಿಯ ಕಾಂಗ್ರೆಸ್ ಮುಖಂಡ ರಾವಣೇಶ್ವರ ನಿವಾಸಿ ಪಿ. ಕುಂಞಿರಾಮನ್ (89) ನಿಧನ ಹೊಂದಿದರು. ಅಜಾನೂರು ಮಂಡಲ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಬ್ಲೋಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ, ಚಿತ್ತಾರಿ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸಹಿತ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಕಲ್ಯಾಣಿ ಅಮ್ಮ, ಮಕ್ಕಳಾದ ರವೀಂದ್ರನ್ ವಿ., ಪವಿತ್ರನ್, ಉಣ್ಣಿಕೃಷ್ಣನ್, ಸತಿ, ಅಳಿಯ ರಾಮಕೃಷ್ಣನ್, ಸೊಸೆಯಂದಿರಾದ ಗೀತಾ ಪಿ., ಶ್ರೀಜ, ಸೌಮಿನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.