ರೆಸಾರ್ಟ್‌ಗೆ ಕಿಚ್ಚಿಟ್ಟು ಯುವಕ ಆತ್ಮಹತ್ಯೆ
ಕಣ್ಣೂರು: ರೆಸಾರ್ಟ್‌ಗೆ ಕಿಚ್ಚಿರಿಸಿದ ಬಳಿಕ ನೌಕರ ಆತ್ಮ ಹತ್ಯೆಗೈದ ಘಟನೆ ನಡೆದಿದೆ. ಪಾಲ ಕ್ಕಾಡ್ ನಿವಾಸಿ ಪ್ರೇಮನ್ ಎಂ ಬಾತ ಸಾವಿಗೀಡಾದ ಯುವಕನಾಗಿದ್ದಾನೆ. ಕಣ್ಣೂರು ಪಯ್ಯಾಂಬಲ ಎಂಬಲ್ಲಿನ ಬಾನೂಸ್ ಬೀಚ್ ಎನ್ ಕ್ಲೇವ್ ನಲ್ಲಿ ನಿನ್ನೆ ಮಧ್ಯಾಹ್ನ ವೇಳೆ ಈ ಘಟನೆ ನಡೆದಿದೆ. ರೆಸಾರ್ಟ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಸ್ಥಳೀಯರು ನಡೆಸಿದ ಕಾರ್ಯಾಚರಣೆ ವೇಳೆ ಯುವಕ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ಗ್ಯಾಸ್ ಸಿಲಿಂಡರ್ ತೆರೆದಿಟ್ಟು ಪೆಟ್ರೋಲ್ ಸುರಿದು ಕಿಚ್ಚಿಟ್ಟಿರುವುದಾಗಿ ಹೇಳಲಾಗುತ್ತಿದೆ.
ಘಟನೆಯಿಂದ ರೆಸಾರ್ಟ್‌ನಲ್ಲಿದ್ದ ಯಾರೂ ಗಾಯ ಗೊಂಡಿಲ್ಲ. ಇದೇ ವೇಳೆ ಎರಡು ಸಾಕು ನಾಯಿಗಳು ಸಾವಿಗೀ ಡಾಗಿವೆ. ಪ್ರೇಮನ್ ಈ ಹಿಂದೆ ರೆಸಾರ್ಟ್‌ನಲ್ಲಿ ಕಾರ್ಮಿಕನಾ ಗಿದ್ದಾನೆನ್ನಲಾಗಿದೆ. ಈತನನ್ನು ಕೆಲಸದಿಂದ ಹೊರಹಾಕಲು ತೀರ್ಮಾನಿಸಲಾಗಿತ್ತೆನ್ನಲಾಗಿದೆ. ಈ ದ್ವೇಷದಿಂದ ಈತ ರೆಸಾರ್ಟ್‌ಗೆ ಕಿಚ್ಚಿರಿಸಿರುವುದಾಗಿ ಸಂಶಯಿಸಲಾಗಿದೆ.