ಕರ್ನಾಟಕ ನಿವಾಸಿ ಕಾರ್ಮಿಕ ಅಸೌಖ್ಯ ಬಾಧಿಸಿ ನಿಧನ
ಕಾಸರಗೋಡು: ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕರ್ನಾಟಕ ನಿವಾಸಿ ಕಾರ್ಮಿಕ ಮೃತಪಟ್ಟರು.
ಶಿವಮೊಗ್ಗ ನಿವಾಸಿಯೂ ಪ್ರಸ್ತುತ ಕಾಸರಗೋಡು ನಗರದ ನಾಯಕ್ಸ್ ರಸ್ತೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಮಂಜುನಾಥ (49) ಮೃತಪಟ್ಟ ವ್ಯಕ್ತಿ. ಇವರು ಕಾಸರಗೋಡಿನಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ಅಸೌಖ್ಯ ಬಾಧಿಸಿ ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ದಿ| ಮಾದಪ್ಪ ಎಂಬವರ ಪುತ್ರನಾದ ಮೃತರು ತಾಯಿ ಶಾಂತಮ್ಮ, ಪತ್ನಿ ಜಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರ ಚೆನ್ನಿಕರೆಯ ಸಾರ್ವಜನಿಕ ಸ್ಮಶಾನದಲ್ಲಿ ನಡೆಯಲಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ.