ತಾಲೂಕು ಮಟ್ಟದ ಅದಾಲತ್ ನಾಳೆಯಿಂದ ಕಾಸರಗೋಡು ತಾಲೂಕಿನಲ್ಲಿ 305 ದೂರುಗಳು
ಕಾಸರಗೋಡು: ರಾಜ್ಯ ಸರಕಾರದ ನಾಲ್ಕನೇ ವಾರ್ಷಿಕ ದಂಗವಾಗಿ ವಿವಿಧ ಇಲಾಖೆಗಳನ್ನು ಸಂಯೋಜಿಸಿಕೊಂಡು ಸಾರ್ವಜನಿಕರ ದೂರುಗಳನ್ನು ಪರಿಹರಿಸಲು ಸಚಿವರುಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ದೂರು ಪರಿಹಾರ ಅದಾಲತ್ ನಾಳೆಯಿಂದ ನಡೆಯಲಿದೆ. ಕಾಸರಗೋಡು ತಾಲೂಕು ದೂರು ಪರಿಹಾರ ಅದಾಲತ್ ನಾಳೆ ಬೆಳಿಗ್ಗೆ 10ಕ್ಕೆ ಕಾಸರಗೋಡು ನಗರಸಭಾ ಪುರಭವನದಲ್ಲಿ ನಡೆಯಲಿದೆ. ರಾಜ್ಯ ನೋಂದಣಿ, ಮ್ಯೂಸಿಯಂ, ಪುರಾವಸ್ತು ಇಲಾಖೆ ಸಚಿವ ರಾಮಚಂದ್ರನ್ ಕಡನ್ನಪ್ಪಳ್ಳಿ ಉದ್ಘಾಟಿಸುವರು. ಅಲ್ಪಸಂಖ್ಯಾತ ಕ್ಷೇಮ, ಕ್ರೀಡಾ, ಮೀನುಗಾರಿಕಾ ಸಚಿವ ವಿ. ಅಬ್ದುರಹ್ಮಾನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಶಾಸಕರಾದ ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ. ಇಂಬಶೇಖರ್, ನಗರಸಭಾ ಚೆಯರ್ ಮೆನ್ ಅಬ್ಬಾಸ್ ಬೀಗಂ, ಬ್ಲೋಕ್ ಪಂಚಾಯತ್ ಅಧ್ಯಕ್ಷರಾದ ಸಿ.ಎ. ಸೈಮಾ, ಸಿಜಿ ಮ್ಯಾಥ್ಯೂ, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸುವರು.
ಜನವರಿ 3ರಂದು ಹೊಸದುರ್ಗ ತಾಲೂಕು ಅದಾಲತ್ ಕಾಞಂಗಾಡ್ ನಗರಸಭಾ ಪುರಭವನದಲ್ಲಿ, ೪ರಂದು ಮಂಜೇಶ್ವರ ತಾಲೂಕು ಅದಾಲತ್ ಉಪ್ಪಳದಲ್ಲೂ, 6ರಂದು ವೆಳ್ಳರಿಕುಂಡ್ ತಾಲೂಕು ಅದಾಲತ್ ವೆಳ್ಳರಿಕುಂಡ್ ನಲ್ಲೂ ನಡೆಯಲಿದೆ. ಕಾಸರಗೋಡು ತಾಲೂಕು ಮಟ್ಟದ ಅದಾಲತ್‌ಗೆ ಇದುವರೆಗೆ 305 ದೂರುಗಳು ಲಭಿಸಿವೆ. ಹೊಸದುರ್ಗ ತಾಲೂಕಿನಲ್ಲಿ 362, ಮಂಜೇಶ್ವರದಲ್ಲಿ 235, ವೆಳ್ಳರಿಕುಂಡ್‌ನಲ್ಲಿ 166ದೂರುಗಳು ಲಭಿಸಿವೆ. ಅದಾಲತ್‌ಗಳಲ್ಲಿ ಲಭಿಸಿದ ದೂರುಗಳಿಗೆ ಪರಿಹಾರ ನೀಡಲಾಗುವುದು. ಅದರಲ್ಲಿ ತೃಪ್ತಿ ಇಲ್ಲದಿದ್ದರೆ ಸಚಿವರನ್ನು ನೇರವಾಗಿ ಆ ಬಗ್ಗೆ ದೂರು ನೀಡಬಹುದೆಂ ದು ಸಂಬಂಧಪಟ್ಟವರು ತಿಳಿಸಿದ್ದಾರೆ.