ದುಬಾಯಿಂದ ಹಿಂತಿರುಗಿದ ಯುವತಿ ಅಸೌಖ್ಯದಿಂದ ಸಾವು

ಕಾಸರಗೋಡು: ದುಬಾಯಿಂದ ಊರಿಗೆ ಹಿಂತಿರುಗಿದ ಯುವತಿ ಅಸೌಖ್ಯದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ತಳಂಗರೆ ನುಸ್ರತ್‌ನಗರದ ಟಿ.ಎಸ್. ಫಾತಿಮ್ಮತ್ ಸರ್ಫಾನ್ (25) ಸಾವನ್ನಪ್ಪಿದ ಯುವತಿ. ದುಬಾಯಲ್ಲಿದ್ದ ಇವರು ಒಂದು ವಾರದ ಹಿಂದೆಯಷ್ಟೇ ಊರಿಗೆ ಹಿಂತಿರುಗಿದ್ದರು. ಬಳಿಕ ಅಸೌಖ್ಯದಿಂ ದ ಬಳಲತೊಡ ಗಿದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾ ಗಿತ್ತು. ಅದು ಫಲಕಾರಿ ಯಾಗದೆ ಅವರು  ಮೃತಪಟ್ಟಿದ್ದಾರೆ.  ಮೃತರು ತಂದೆ ಮೊಹಮ್ಮದ್ ಶಾಫಿ, ತಾಯಿ ರಶೀದಾ, ಪತಿ ಮುನ್ಸೀರ್ ಪಟ್ಲ, ಏಕಪುತ್ರಿ ಲೈಸಾನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page