ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಗಾಯಗೊಂಡ ಬೈಕ್ ಸವಾರ ಮೃತ್ಯು
ಕಾಸರಗೋಡು: ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಳಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಚಟ್ಟಂಚಾಲ್‌ಗೆ ಸಮೀಪದ ಕರಿಚ್ಚೇರಿ ಪರಂಬು ಪಳ್ಳದ ಜಿ. ಮಣಿಚಂದ್ರನ್ ಪಿಳ್ಳೆ (58) ಸಾವನ್ನಪ್ಪಿದ ವ್ಯಕ್ತಿ. ಚಟ್ಟಂಚಾಲ್-ದೇಳಿ ರಸ್ತೆಯ ಮೂಡಂವಯಲು ಎಂಬಲ್ಲಿ ಮೊನ್ನೆ ಮಣಿಚಂದ್ರನ್ ಪಿಳ್ಳೆ ಚಲಾಯಿಸುತ್ತಿದ್ದ ಬೈಕ್‌ಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿತ್ತು.
ಗಂಭೀರ ಗಂಭೀರಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.
ಮೂಲತಃ ಕೊಲ್ಲಂ ಪರವೂರು ಮಿನಿ ಎಸ್ಟೇಟ್ ಬಳಿಯ ಪೂತಕುಳಂ ನಿವಾಸಿಯಾಗಿರುವ ಮೃತರು ಮೂರು ವರ್ಷದ ಹಿಂದೆ ಅಲ್ಲಿಂದ ಕರಿಚ್ಚೇರಿಪರಂಬು ಪಳ್ಳಕ್ಕೆ ಆಗಮಿಸಿ ಅಲ್ಲಿ ಖಾಯಂ ವಾಸವಾಗತೊಡಗಿದ್ದರು.
ಗಣಪತಿ ಪಿಳ್ಳೆ-ಭವಾನಿ ದಂಪತಿ ಪುತ್ರನಾಗಿರುವ ಮೃತರು ಪತ್ನಿ ಎಂ. ರೋಹಿಣಿ, ಮಕ್ಕಳಾದ ಮಂಜು, ಅಂಜು (ದಾದಿ ಕಾಸರಗೋಡು ಜನರಲ್ ಆಸ್ಪತ್ರೆ), ಚಿಂಜು, ಸಹೋದರಿ ಮಾಣಿಯಮ್ಮ, ಅಳಿಯಂದಿರಾದ ಸಂದೀಪ್, ಅನೀಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.