ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಆರಂಭ
ಸುಂಕದಕಟ್ಟೆ: ಕೋಳ್ಯೂರುಪದವು ಶ್ರೀ ಶಂಕರನಾರಾಯಣ ದೇವಸ್ಥಾನ ದಲ್ಲ್ಲಿ ವಾರ್ಷಿಕ ಜಾತ್ರೆ, ಮಂಡಲ ಪೂಜೆ ನಿನ್ನೆ ಆರಂಭಗೊಂಡಿದ್ದು, ನಾಳೆ ಸಮಾಪ್ತಿಯಾಗಲಿದೆ.
ನಿನ್ನೆ ಸಂಜೆ ಭಜನೆ, ರಾತ್ರಿ ಕಾರ್ತಿಕಪೂಜೆ, ಬಲಿ ಉತ್ಸವ, ಇಂದು ಬೆಳಿಗ್ಗೆ ಶ್ರೀ ನಾರಾಯಣ ದೇವರ ಬಲಿ ಉತ್ಸವ, ಕುಣಿತ ಭಜನೆ, ತುಲಾಭಾರ, ಬಲಿ ಉತ್ಸವ, ಮಹಾಪೂಜೆ, ಅನ್ನಸಂತರ್ಪಣೆ ಜರಗಿತು.
ಸಂಜೆ ಸಂಗೀತ ಕಾರ್ಯಕ್ರಮ, ರಾತ್ರಿ 7.30ಕ್ಕೆ ಬಯ್ಯನಬಲಿ, ಕಟ್ಟೆಪೂಜೆ, ಬಲಿ, ನಾಳೆ ಬೆಳಿಗ್ಗೆ 8.30ಕ್ಕೆ ಗಾನಮಾಲೆ, 10ರಿಂದ ಬಲಿ ಉತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ 2.30ರಿಂದ ಯಕ್ಷಗಾನ ಬಯಲಾಟ, ರಾತ್ರಿ ರಂಗಪೂಜೆ, ಶ್ರೀ ಭೂತಬಲಿ ಉತ್ಸವ ನಡೆಯಲಿದೆ.