ಅನಧಿಕೃತವಾಗಿ ಹೊಯ್ಗೆ ಸಾಗಾಟ: ಲಾರಿ ವಶ
ಕುಂಬಳೆ: ಅಂಗಡಿಮೊಗರು ಹೊಳೆಯಿಂದ ಅನಧಿಕೃತವಾಗಿ ಸಾಗಿಸುತ್ತಿದ್ದ ಒಂದು ಲೋಡ್ ಹೊಯ್ಗೆಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಕ್ಕೆ ತೆಗೆದು ಅದರಲ್ಲಿದ್ದ ಮುಟ್ಟತ್ತೋಡಿಯ ಸಿರಾಜುದ್ದೀನ್ (43), ಅಂಗಡಿಮೊಗರಿನ ಅಬ್ದುಲ್ ರಹ್ಮಾನ್ (48) ಎಂಬಿವರನ್ನು ಬಂಧಿಸಲಾಗಿದೆ.
ನಿನ್ನೆ ಸಂಜೆ 5.30ಕ್ಕೆ ಕುಂಬಳೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಈ ಕಾರ್ಯಾಚರಣೆ ನಡೆಸಿದ್ದಾರೆ. ಅಂಗಡಿಮೊಗರು ಹೊಳೆಯಿಂದ ಸಂಜೆ 5 ಗಂಟೆ ವರೆಗೆ ಮಾತ್ರವೇ ಹೊಯ್ಗೆ ಹೇರಿ ಸಾಗಿಸಬ ಹುದೆಂದು ಅದಕ್ಕಾಗಿ ನೀಡಲಾದ ಬಿಲ್‌ನಲ್ಲಿ ತಿಳಿಸಲಾಗಿದೆ. ಆದರೆ ಆ ಸಮಯಮೀರಿ ಹೊಯ್ಗೆ ಸಾಗಿಸಿದ ಹಿನ್ನೆಲೆಯಲ್ಲಿ ಲಾರಿಯನ್ನು ವಶಪಡಿ ಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.