ಮಂಗಲ್ಪಾಡಿ ಪಂಚಾಯತ್ ಕಚೇರಿಗೆ ಬಿಜೆಪಿ ಪ್ರತಿಭಟನೆ
ಉಪ್ಪಳ: ವಯನಾಡು ಪ್ರಕೃತಿ ವಿಕೋಪ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಸಾಮಗ್ರಿಗಳನ್ನು ಮಾರಾಟ ಮಾಡಿದ ಆರೋಪದಲ್ಲಿ ಮಂಗಲ್ಪಾಡಿ ಪಂಚಾ ಯತ್ ಮುಸ್ಲಿಂ ಲೀಗ್ ಸದಸ್ಯರ ವಿರುದ್ಧ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಪ್ರತಿಭಟನೆ ನಡೆಸಿತು. ದಕ್ಷಿಣ ವಲಯ ಅಧ್ಯಕ್ಷ ರಾಮಚಂದ್ರ ಬಲ್ಲಾಳ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಸುನಿಲ್ ಕುಮಾರ್ ಅನಂತಪುರ, ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಎಸ್‌ಸಿ ಮೋರ್ಛಾದ ಎ.ಕೆ. ಕಯ್ಯಾರು, ಮುಖಂಡರಾದ ಬಾಬು ಕುಬಣೂರು, ಕೊರಗಪ್ಪ ಶೆಟ್ಟಿ, ಅವಿನಾಶ್ ಕಾರಂತ, ಬಾಲಕೃಷ್ಣ ಅಂಬಾರು, ರಘು ಸಿ ಚೆರುಗೋಳಿ ಹಾಗೂ ಕಾರ್ಯಕರ್ತರು ಭಾಗವಹಿಸಿದರು.