ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ ಆಮಂತ್ರಣಪತ್ರಿಕೆ ಬಿಡುಗಡೆ
ಮುಳ್ಳೇರಿಯ: ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಹೋತ್ಸವ ಮಾರ್ಚ್ 1ರಿಂದ 6ರ ವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕ್ಷೇತ್ರದಲ್ಲಿ ನಿನ್ನೆ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಅಗಲ್ಪಾಡಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ದರು. ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ ಮಣಿಯಾಣಿ ಕೋಳಿ ಕ್ಕಾಲು, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿ ಕಾರಿ ಗಣೇಶ್ ವಲ್ಸ ನೆಕ್ರಾಜೆ, ಆರ್ಥಿಕ ಸಮಿತಿ ಅಧ್ಯಕ್ಷ ರಾಜೇಶ್ ಮಜಕ್ಕಾರು, ವಿನೋದ್ ಕೊಟ್ಟಂಗುಳಿ ಶುಭ ಹಾರೈಸಿದರು. ಇದೇ ವೇಳೆ ನಿಧಿ ಸಂಗ್ರಹ ಕಾರ್ಯಕ್ರಮ ಜರಗಿತು. ನಿಧಿ ಸಂಗ್ರಹಣೆಯ ಉದ್ಘಾಟನೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಕೋಶಾಧಿಕಾರಿ ಗಣೇಶ ವತ್ಸ ಅವರಿಗೆ ನೀಡಿ ನೆರವೇರಿಸಿದರು. ಮುದ್ರಣ ಸಮಿತಿ ಅಧ್ಯಕ್ಷ ಹರ್ಷ ಕುಮಾರ್ ರೈ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ ಐ. ಕಾನಕ್ಕೋಡು ವಂದಿಸಿದರು. ದೇವಾನಂದ ಶೆಟ್ಟಿ ಕಾನಕ್ಕೋಡು ನಿರೂಪಿಸಿದರು. ಚಂದ್ರಶೇಖರ, ರೋಹಿಣಿ ಚಂದ್ರನ್ ಕಾನಕ್ಕೋಡು ಮೊದಲಾದವರು ಉಪಸ್ಥಿತರಿದ್ದರು.