ಅಪರಿಮಿತ ಶಬ್ದ ಸೃಷ್ಟಿಸಿ ಬೈಕ್ ಚಾಲನೆ: ಇನ್ನೋರ್ವ ಸೆರೆ
ಕುಂಬಳೆ: ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವ ರೀತಿಯಲ್ಲಿ ಅಪರಿಮಿತ ಶಬ್ದವುಂಟು ಮಾಡಿ ಬೈಕ್ ಸವಾರಿ ನಡೆಸಿದ ಇನ್ನೋರ್ವನನ್ನು ಬಂಧಿಸಲಾಗಿದೆ. ಮುಜಿಮುಡಿ ದೇವಿನಗರ ನಿವಾಸಿ ಹರಿಕೃಷ್ಣ (19) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮುಂಜಾನೆ ಸೀತಾಂಗೋಳಿಯಿಂದ ಕುಂಬಳೆಗೆ ಭಾರೀ ಶಬ್ದ ಸೃಷ್ಟಿಸಿ ಬೈಕ್ ಸಂಚರಿಸುತ್ತಿತ್ತು. ವಿಷಯ ತಿಳಿದು ಎಸ್‌ಐ ಕೆ. ಶ್ರಿಜೇಶ್ ನೇತೃತ್ವದ ಪೊಲೀಸರು ನಡೆಸಿದ ತಪಾಸಣೆ ವೇಳೆ ಬೈಕ್‌ನ್ನು ಪತ್ತೆಹಚ್ಚಲಾಗಿದೆ. ಸೆರೆಗೀಡಾದ ಯುವಕನನ್ನು ಬಳಿಕ ಬಿಡುಗಡೆಗೊಳಿಸಲಾಗಿದೆ.
ನಂಬ್ರ ಪ್ಲೇಟ್ ಹಾಗೂ ಸೈಲೆನ್ಸರ್‌ನ ಮಫ್ಲರ್ ಕಳಚಿಟ್ಟು ಭಾರೀ ಶಬ್ದ ದೊಂದಿಗೆ ಯುವಕರು ಬೈಕ್ ಸಂಚಾರ ನಡೆಸುತ್ತಿರುವುದು ತೀವ್ರಗೊಂಡಿದೆ.
ಇತ್ತೀಚೆಗೆ ಇದೇ ರೀತಿಯಲ್ಲಿ ಬೈಕ್ ಚಲಾಯಿಸಿದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದರು. ಮೊಗ್ರಾಲ್ ಪುತ್ತೂರು ಚೌಕಿಯ ಮೊಹಮ್ಮದ್ ಜುನೈದ್ ಬಿ.ಎ. (19), ಕಾಸರಗೋಡು ಅಣಂಗೂರಿನ ಅಹಮ್ಮದ್ ಅಲ್‌ಹಬಲ್ (20) ಎಂಬಿವರನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಹಾಗೂ ಎಸ್‌ಐ ಕೆ. ಶ್ರಿಜೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದರು.