ಕಾಸರಗೋಡು: ಐದು ಲೀಟರ್ ಅಕ್ರಮ ಮದ್ಯ ಕೈವಶವಿರಿಸಿಕೊಂಡ ಆರೋಪದಂತೆ ಹೊಸದುರ್ಗ ಎಕ್ಸೈಸ್ ಸರ್ಕಲ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ರಘುನಾಥನ್ ಎಸ್.ಜೆ. ನೇತೃತ್ವದ ತಂಡ ಓರ್ವನನ್ನು ಬಂಧಿಸಿದೆ. ಬಳಾಲ್ ಗ್ರಾಮದ ಅರಿಕ್ಕೆರೆ ನೆಲ್ಲಿಕ್ಕಾಬ್ ನಿವಾಸಿ ರಾಘವನ್ ಕೆ.ಎನ್ ಎಂಬಾತನನ್ನು ಈ ಸಂಬಂಧ ಬಂಧಿಸಿ ಕೇಸು ದಾಖಲಿಸಲಾಗಿದೆ.