ಕಾಂಗ್ರೆಸ್ ಜಿಲ್ಲಾ ಸಮಾವೇಶ: ಕೆ.ಪಿ. ಕುಂಞಿಕಣ್ಣನ್ ಸಂಸ್ಮರಣಾ ಕಾರ್ಯಕ್ರಮ ನಾಳೆ
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಶೀಘ್ರ ಚುನಾವಣೆ ನಡೆಯಲಿರುವಂತೆಯೇ ಅದಕ್ಕಿರುವ ಪೂರ್ವಭಾವಿ ಸಿದ್ಧತೆಗಳನ್ನು ನಡೆಸಲು ಪಕ್ಷವನ್ನು ಈಗಲೇ ತೊಡಗಿಸುವ ಉದ್ದೇಶದಿಂದ ಕಾಂಗ್ರೆಸ್‌ನ ಜಿಲ್ಲಾ ಸಮಿತಿಯ ಸಮಾವೇಶ ನಾಳೆ ಹೊಸದುರ್ಗ ಕೊವ್ವಲ್ ಪಳ್ಳಿಯಲ್ಲಿ ನಡೆಯಲಿದೆ. ಇದರ ಜೊತೆಗೆ ಮಾಜಿ ಶಾಸಕ ದಿ| ಕೆ.ಪಿ. ಕುಂಞಿಕಣ್ಣನ್‌ರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ.
ನಾಳೆ ಮಧ್ಯಾಹ್ನ 1.30ಕ್ಕೆ ಆರಂಭಗೊಳ್ಳುವ ಸಮಾವೇಶವನ್ನು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಸದ ಕೆ.ಸಿ. ವೇಣು ಗೋಪಾಲ್ ಉದ್ಘಾಟಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಸಂಸ್ಮರಣಾ ಭಾಷಣ ಮಾಡುವರು. ಕಾಂಗ್ರೆಸ್‌ನ ಹಲವು ರಾಜ್ಯ ನೇತಾರರೂ ಇದರಲ್ಲಿ ಭಾಗವಹಿಸುವರೆಂದು ಜಿಲ್ಲಾ ಕಾಂಗ್ರೆಸ್ ಅಧಕ್ಷ ಪಿ.ಕೆ. ಫೈಸಲ್, ಪ್ರಧಾನ ಕಾರ್ಯದರ್ಶಿಗಳಾದ ಸಿ.ವಿ. ಸುರೇಶ್ ಮತ್ತು ಎಂ.ಸಿ. ಪ್ರಭಾಕರನ್ ತಿಳಿಸಿದ್ದಾರೆ.