ನಿಧನ
ಹೊಸಂಗಡಿ: ಕಡಂಬಾರು ಬೆಜ್ಜ ನಿವಾಸಿ ಸಚೀಂದ್ರ ಶೆಟ್ಟಿ (70) ನಿಧನ ಹೊಂದಿದರು. ಬೆಜ್ಜ ಶ್ರೀ ಕೊರಗ ತನಿಯ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ, ಗೌರವಾಧ್ಯಕ್ಷರಾಗಿದ್ದರು. ಮೃತರು ಪತ್ನಿ ಲಲಿತಾ, ಮಕ್ಕಳಾದ ಆಶಾ, ನಿಷಾ, ನಿತಿನ್,ಅಳಿಯಂದಿರಾದ ಮನೋಜ್, ದಿವಾಕರ, ಸೊಸೆ ನಿಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಿಧನಕ್ಕೆ ಶ್ರೀ ಕೊರಗಜ್ಜ ಸೇವಾ ಸಮಿತಿ ಕಡಂಬಾರು ಬೆಜ್ಜ ಮತ್ತು ಶಾಸ್ತಾ ಕೃಪಾ ವೀರಾಂಜನೇಯ ಕಡಂಬಾರು ಸಂತಾಪ ಸೂಚಿಸಿದೆ.