ನಾರಂಪಾಡಿ ಕ್ಷೇತ್ರ ಬ್ರಹ್ಮಕಲಶೋತ್ಸವ:  ಶ್ರೀ ಉಮಾ ಮಹೇಶ್ವರ ಸಹಿತ ಪರಿವಾರ ದೇವರ ಪ್ರತಿಷ್ಠೆ ನಾಳೆ

ನಾರಂಪಾಡಿ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ  ನಾಳೆ ಬೆಳಿಗ್ಗೆ 5ರಿಂದ 108 ಕಾಯಿ ಗಣಪತಿಹೋಮ, 9.55ರಿಂದ ಶ್ರೀ ಉಮಾಮಹೇಶ್ವರ ಮತ್ತು ಪರಿವಾರ ದೇವರ ಪ್ರತಿಷ್ಠೆ ನಡೆಯಲಿದೆ. ಇದರಂಗವಾಗಿ ಜೀವಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಪ್ರತಿಷ್ಠಾಬಲಿ, ಮಹಾಪೂಜೆ ಮೊದಲಾದ ಕಾರ್ಯ ಕ್ರಮಗಳು ನಡೆಯಲಿದೆ.  11ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು.  ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸುವರು.  ಮಾಯಿಪ್ಪಾಡಿ ಅರಮನೆಯ ದಾನಮಾರ್ತಾಂಡ ವರ್ಮರಾಜ ಯಾನೆ ರಾಮಂತರ ಸುಗಳು ಉಪಸ್ಥಿತರಿರುವರು.  ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಹಲವು ಗಣ್ಯರು ಭಾಗವಹಿಸುವರು.

ಇಂದು ಬೆಳಿಗ್ಗೆ ಗಣಪತಿಹೋಮ, ತ್ರಿಕಾಲಪೂಜೆ ಮೊದಲಾದ ವೈದಿಕ ಕಾರ್ಯಕ್ರಮಗಳು, ಸಂಜೆ ಬಿಂಬಶುದ್ಧಿ ಸಹಿತ ವಿವಿಧ ಪೂಜೆಗಳು ನಡೆಯ ಲಿವೆ. ವಿವಿಧ ಭಜನಾ ತಂಡಗಳಿಂದ ಭಜನೆ,  ಸಾಂಸ್ಕೃತಿಕ ಕಾರ್ಯಕ್ರ ಮಗಳು ನಿರಂತರ ನಡೆಯುತ್ತಿದ್ದು, ಅನ್ನಸಂತರ್ಪಣೆಯಲ್ಲಿ ನೂರಾರು ಮಂದಿ ಭಾಗವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page