ಪತಿಯೊಂದಿಗಿನ ವಿರಸ ಕೊನೆಗೊಳಿಸುವ ನೆಪದಲ್ಲಿ ಮಂತ್ರವಾದಿಯಿಂದ ಯುವತಿಗೆ ದೌರ್ಜನ್ಯ: 61 ಲಕ್ಷ ರೂ. ವಂಚನೆ ಆರೋಪ

ತೃಶೂರು: ಪತಿಯೊಂದಿಗಿನ ವೈಷಮ್ಯವನ್ನು ಕೊನೆಗೊಳಿಸುವುದಾಗಿ ನಂಬಿಸಿ ಮಾದಕಪದಾರ್ಥ ಮಾತ್ರೆ ನೀಡಿ ಹಲವು ಬಾರಿ ದೌರ್ಜನ್ಯಗೈದು 61 ಲಕ್ಷ ರೂ. ಅಪಹರಿಸಿರುವುದಾಗಿ ನೀಡಿದ ದೂರಿನಂತೆ ಮಂತ್ರವಾದಿ ಹಾಗೂ ಸಹಾಯಕ ಸೆರೆಯಾಗಿದ್ದಾರೆ. ಮಲಪ್ಪುರಂ ಮಾರಂಜೇರಿ ನಿವಾಸಿ ಮಂತ್ರವಾದಿ ತಾಜುದ್ದೀನ್ (46) ಹಾಗೂ ಈತನ ಸಹಾಯಕ ನಾಯರಂಙಾಡಿ ಶಕೀರ್ (27) ಎಂಬಿವರನ್ನು ಚಾವಕ್ಕಾಡಿ ಪೊಲೀಸ್ ಇನ್ಸ್‌ಪೆಕ್ಟರ್ ವಿ.ವಿ. ವಿಮಲ್‌ರ ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ. ಪತಿಯೊಂದಿಗೆ ವಿರಸಹೊಂದಿ ಯುವತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ಮಧ್ಯೆ ಮಂತ್ರವಾದಿಯ ಶಿಷ್ಯನೆಂದು ನಂಬಿಸಿ ಶಕೀರ್ ಯುವತಿಯ ಮನೆಗೆ ತಲುಪಿ ತಲೆನೋವಿಗಿರುವ ಔಷಧಿ ಎಂದು ತಿಳಿಸಿ ಮಾತ್ರೆ ನೀಡಿದ್ದನು. ಇದನ್ನು ಸೇವಿಸಿದ ಯುವತಿ ಪ್ರಜ್ಞಾಹೀನಳಾದಳು. ಬಳಿಕ ಶಕೀರ್ ಯುವತಿಯ ನಗ್ನ ಚಿತ್ರ ತೆಗೆದು, ಯುವತಿಗೆ ಪ್ರಜ್ಞೆ ಮರಳಿದ ಬಳಿಕ ಈ ಚಿತ್ರಗಳನ್ನು ತೋರಿಸಿ ಲೈಂಗಿಕವಾಗಿ ದೌರ್ಜನ್ಯಗೈದು ಲಕ್ಷಾಂತರ ರೂಪಾಯಿ ವಂಚಿಸಿರುವು ದಾಗಿಯೂ ಹೇಳಲಾಗಿದೆ. ಆ ಬಳಿಕ ಮಂತ್ರವಾದಿ ತಾಜುದ್ದೀನ್ ಯುವತಿಯ ಮನೆಗೆ ತಲುಪಿ ಯುವತಿಗೆ ಪ್ರೇತಬಾಧೆ ಇದೆ ಎಂದು ತಿಳಿಸಿ ಅದಕ್ಕೆ ಪರಿಹಾರ ಮಾಡುವುದಾಗಿ ಔಷಧಿ ನೀಡಿದನು.

ಅದನ್ನು ಸೇವಿಸಿದ ಯುವತಿ ಪ್ರಜ್ಞಾಹೀನ ಳಾದಾಗ ಆಕೆಯನ್ನು ದೌರ್ಜನ್ಯಗೈದಿದ್ದಾನೆ. ಬಳಿಕ ಹಲವು ಬಾರಿಯಾಗಿ ಯುವತಿಯ ಮನೆಗೆ ತಲುಪಿ ಇದೇ ರೀತಿ ನಡೆಸಿರುವುದಾಗಿಯೂ, ೬೦ ಲಕ್ಷ ರೂ. ವಂಚಿಸಿರುವುದಾಗಿಯೂ ಚಾವಕ್ಕಾಡ್ ಪೊಲೀಸರು ದಾಖಲಿಸಿದ ದೂರಿನಲ್ಲಿ ಹೇಳಲಾಗಿದೆ.

Leave a Reply

Your email address will not be published. Required fields are marked *

You cannot copy content of this page