ರೋಟರಿ ಬದಿಯಡ್ಕ ಕನಸಿನ ಮನೆ ಯೋಜನೆಗೆ ಚಾಲನೆ

ಬದಿಯಡ್ಕ: ರೋಟರಿ ಕನಸಿನ ಮನೆ ಯೋಜನೆಯ ಅಂಗವಾಗಿ ನಾರಂಪಾಡಿ ಪಿಲಿಕೂಡ್ಲು ಉಷಾ ಕುಮಾರಿ ಎಂಬವರಿಗೆ ಮಂಜೂರಾದ ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನಡೆಸಲಾಯಿತು. ರೋಟರಿ ಬದಿಯಡ್ಕ ನೇತೃತ್ವದಲ್ಲಿ ಕಾಮಗಾರಿಗಳು ನಡೆಯಲಿದ್ದು ಘಟಕ ಅಧ್ಯಕ್ಷ ಕೇಶವ ಪಾಟಾಳಿ ಬದಿಯಡ್ಕ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಚೆಂಗಳ ಪಂಚಾಯತ್ ಸದಸ್ಯ ಲತೀಫ್ ನಾರಂಪಾಡಿ, ರೋಟರಿ ಕಾರ್ಯದರ್ಶಿ ರಮೇಶ ಆಳ್ವ ಕಡಾರು, ಕೋಶಾಧಿಕಾರಿ ಗೋಪಾಲಕೃಷ್ಣ ಕಾಮತ್, ಸದಸ್ಯ ಕೃಷ್ಣ ಪ್ರತೀಕ ಬೆಳ್ಳಿಗೆ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page