ಮಂಜೇಶ್ವರ ಪಂಚಾಯತ್‌ನಲ್ಲಿ ವಿಇಒ ವರ್ಗಾವಣೆ: ಬಿಜೆಪಿ ಖಂಡನೆ

ಮಂಜೇಶ್ವರ: ಪಂಚಾಯತ್‌ನಲ್ಲಿ ವರ್ಗಾವಣೆಯ ಆಟ ನಡೆಯುತ್ತಿದೆ ಎಂದು ಬಿಜೆಪಿ ದೂರಿದೆ. ಇದ್ದ ಇಬ್ಬರು ವಿಇಒಗಳಲ್ಲಿ ಒಬ್ಬರನ್ನು ವರ್ಗಾವಣೆ ಗೊಳಿಸಲಾಗಿದ್ದು, ಮತ್ತೊಬ್ಬರು ಸುದೀ ರ್ಘ ರಜೆ ಪಡೆಯುವ ತೀರ್ಮಾನ ರಾಜಕೀಯ ಪ್ರೇರಿತವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಪಂಚಾಯತ್ ಆಡಳಿತೆಯ ಕೊನೆಯ ವರ್ಷ ಮತ್ತು ಆರ್ಥಿಕ ವರ್ಷದ ಅಂತಿಮ ತಿಂಗಳುಗಳಲ್ಲಿ ಸ್ಥಳೀಯಾಡಳಿತ ಪಂಚಾಯತ್ ಅಧಿಕಾರಿಗಳನ್ನು, ಕ್ಲರ್ಕ್‌ಗಳನ್ನು ವರ್ಗಾವಣೆಗೊಳಿ ಸುತ್ತಿರುವುದು ಯಾವ ಉದ್ದೇಶದಿಂದ ಎಂದು ಬಿಜೆಪಿ ಪ್ರಶ್ನಿಸಿದೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಪಂಚಾಯತ್‌ಗೆ ಬರುವ ಸಾರ್ವಜನಿಕರು ಅಧಿಕಾರಿಗಳಿಲ್ಲ ಎಂಬ ಕಾರಣದಿಂದ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದೆ ಸಂಕಷ್ಟಪಡುತ್ತಿ ದ್ದಾರೆ. ವಿಇಒಗಳಿಲ್ಲದೆ ಇರುವುದರಿಂದ ಲೈಫ್ ವಸತಿ ಯೋಜನೆ ಸೇರಿದಂತೆ ಸರಕಾರದ ಯೋಜನೆಗಳೆಲ್ಲಾ ಅನುಷ್ಠಾನ ಗೊಳಿಸಲು ಆಗದೆ ಸ್ಥಗಿತಗೊಳ್ಳುತ್ತಿವೆ.

ತಾತ್ಕಾಲಿಕವಾಗಿ ಸಮೀಪದ ಪಂಚಾಯತ್‌ನ ವಿಇಒಗಳಿಗೆ ಹೊಣೆಗಾರಿಕೆ ನೀಡಿದ್ದರೂ ಅವರು ಸೂಕ್ತ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುವು ದಿಲ್ಲ ಹಾಗೂ ಕೆಲಸಗಳು ವೇಗದಿಂದ ನಡೆಯುತ್ತಿಲ್ಲವೆಂದು ಬಿಜೆಪಿ ದೂರಿದೆ. ಆರ್ಥಿಕ ವರ್ಷದ ಕೊನೆಯ ಹಂತದಲ್ಲಿ ಕಾರ್ಮಿಕ ಸಂಘಟನೆಯ ಒತ್ತಾಸೆಗೆ ಮಣಿದು ಸರಕಾರ ಉದ್ಯೋಗಿಗಳನ್ನು ವರ್ಗಾವಣೆಗೊಳಿಸುತ್ತಿರುವುದು ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ ಎಂದು ಬಿಜೆಪಿ ತಿಳಿಸಿದೆ.

ಸ್ಥಳೀಯಾಡಳಿತ ಅಧಿಕಾರಿಗಳು ಸರಕಾರಿ ನೌಕರರ ವರ್ಗಾವಣೆ ಆರ್ಥಿಕ ವರ್ಷದ ಅಂತಿಮ ತಿಂಗಳುಗಳಲ್ಲಿ ನಡೆಸದಂತೆ ಬಿಜೆಪಿ ಆಗ್ರಹಿಸಿದೆ.

Leave a Reply

Your email address will not be published. Required fields are marked *

You cannot copy content of this page