ಬಿದ್ದು ಸಿಕ್ಕಿದ ಪರ್ಸ್ ವಾರಿಸುದಾರರಿಗೆ ಹಸ್ತಾಂತರಿಸಿ ಮಾದರಿಯಾದ ಶಾಲಾ ವಿದ್ಯಾರ್ಥಿನಿಯರು
ಕುಂಬಳೆ: ಬಿದ್ದು ಸಿಕ್ಕಿದ ಪರ್ಸ್ ನ್ನು ವಾರಸುದಾರರಿಗೆ ಹಸ್ತಾಂತರಿಸಿ ಶಾಲಾ ವಿದ್ಯಾರ್ಥಿನಿಯರು ಮಾದರಿ ಯಾದರು. ಕುಂಬಳೆ ಸರಕಾರಿ ಸೀನಿಯರ್ ಬೇಸಿಕ್ ಸ್ಕೂಲ್‌ನ 7ನೇ ತರಗತಿ ವಿದ್ಯಾರ್ಥಿನಿ ಅಲ್ಫೋನ್ಸ್ ಹಾಗೂ ೬ನೇ ತರಗತಿಯ ಏಂಜಲ್ ಎಂಬಿವರಿಗೆ ಶಾಲಾ ಪರಿಸರದಲ್ಲಿ ನಿನ್ನೆ ಹಣ, ದಾಖಲೆಪತ್ರಗಳಿದ್ದ ಪರ್ಸ್ ಬಿದ್ದುಸಿಕ್ಕಿತ್ತು. ಅದನ್ನು ವಿದ್ಯಾರ್ಥಿ ನಿಯರು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ನೀಡಿದ್ದರು. ಪೊಲೀಸರು ಪರ್ಸ್‌ನಲ್ಲಿದ್ದ ದಾಖಲೆಪತ್ರಗಳನ್ನು ಪರಿಶೀಲಿಸಿದಾಗ ಅದು ಬಂಬ್ರಾಣ ದಿಡುಮೆಯ ಹುಸೈನಾರ್ ಎಂಬವ ರದ್ದೆಂದು ತಿಳಿದುಬಂತು. ಕೂಡಲೇ ಪೊಲೀಸರು ಹುಸೈನಾರ್‌ರನ್ನು ಠಾಣೆಗೆ ಕರೆಸಿದ್ದು, ಬಳಿಕ ವಿದ್ಯಾರ್ಥಿನಿಯರು ಅವರಿಗೆ ಪರ್ಸ್ ಹಸ್ತಾಂತರಿಸಿದರು. ವಿದ್ಯಾರ್ಥಿನಿಯರ ಪ್ರಾಮಾಣಿಕತೆ ಯನ್ನು ಪೊಲೀಸರು, ಶಾಲಾ ಅಧ್ಯಾಪಕರು, ಪಿಟಿಎ ಹಾಗೂ ನಾಗರಿಕರು ಅಭಿನಂದಿಸಿದ್ದಾರೆ.