ಬಾಡೂರಿನಲ್ಲಿ ಸಾಮೂಹಿಕ ಇಫ್ತಾರ್ ಕೂಟ
ಪುತ್ತಿಗೆ: ಬಾಡೂರು ನವಚೇತನ ಯೂತ್‌ಕ್ಲಬ್ ಮತ್ತು ನವಚೇತನ ಲೈಬ್ರೆರಿ ವತಿಯಿಂದ ನವಚೇತನ ಇಂಡೋರ್ ಮೈದಾನದಲ್ಲಿ ಸಾಮೂಹಿಕ ಇಫ್ತಾರ್ ಕೂಟ ನಡೆಯಿತು. ಕ್ಲಬ್‌ನ ಅಧ್ಯಕ್ಷ ಸಚಿನ್‌ರಾಜ್ ಎಂ., ಕಾರ್ಯದರ್ಶಿ ಕೃಪಾರಾಜ್ ಕೆ. ನೇತೃತ್ವ ನೀಡಿದರು. ಲೈಬ್ರೆರಿ ಅಧ್ಯಕ್ಷ ವಿಖ್ಯಾತ್ ರೈ, ಕಾರ್ಯದರ್ಶಿ ಪೂರ್ಣಚಂದ್ರ ಎಂ, ಕ್ಲಬ್‌ನ ಹಿರಿಯ ಸದಸ್ಯರು, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು, ಜನಪ್ರತಿನಿಧಿಗಳು ಭಾಗವಹಿಸಿದರು.