ಕಟ್ಟಡದಿಂದ ಬಿದ್ದು ಚಿಕಿತ್ಸೆಯಲ್ಲಿದ್ದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ನಿಧನ
ಹೊಸದುರ್ಗ: ಕಟ್ಟಡದಿಂದ ಬಿದ್ದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಮೃತಪಟ್ಟರು.
ಮಡಿಯನ್ ಕುಲೋಂ ಕ್ಷೇತ್ರ ಬಳಿಯ ನಿವಾಸಿ ರಂಜು (42) ಮೃತಪಟ್ಟ ದುರ್ದೈವಿ. ಒಂದೂವರೆ ತಿಂಗಳ ಹಿಂದೆ ಹೊಸದುರ್ಗದ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ನಡೆದ ಮದುವೆ ಅತಿಥಿಸತ್ಕಾರ ಕಾರ್ಯಕ್ರಮ ವೇಳೆ ರಂಜು ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ನಿನ್ನೆ ರಾತ್ರಿ ಮೃತಪಟ್ಟರು. ಇವರು ಕಾಞಂಗಾಡಿನ ಮಹಿಂದ್ರ ಫಿನಾನ್ಸ್ ನೌಕರನಾಗಿದ್ದರು.