ಭರದಿಂದ ನಡೆಯುತ್ತಿರುವ ಉಪ್ಪಳ ಪೇಟೆಯ ಫ್ಲೈಓವರ್ ಕಾಮಗಾರಿ
ಉಪ್ಪಳ: ರಾಷ್ಟಿçÃಯ ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ತಲಪಾಡಿಯಿಂದ ಕಾಸರಗೋಡು ಮಧ್ಯೆ ಕಾಮಗಾರಿ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಇದರಂತೆ ಉಪ್ಪಳ ಪೇಟೆಯಲ್ಲಿ ಫ್ಲೆöÊಓವರ್ ಕಾಮಗಾರಿ ಭರದಿಂದ ನಡೆಯುತ್ತಿದೆ. ಉಪ್ಪಳ ಪೇಟೆಯಲ್ಲಿ ಸುಮಾರು 200 ಮೀಟರ್ ಉದ್ದದ ಫ್ಲೆöÊಓವರ್‌ನ ಕೆಲಸಗಳು ಹಾಗೂ ಕೈಕಂಬದ ಅಂಡರ್ ಪಾಸ್ ಮೇಲ್ಭಾಗ ಪರಿಸರದಲ್ಲಿ ಎತ್ತರಗೊಳಿಸುವ ಕೆಲಸಗಳು ಭರದಿಂದ ನಡೆಯುತ್ತಿದೆÀ. ಡಾಮರೀಕರಣ ಸಹಿತ ಇತರ ಕೆಲಸಗಳು ನಡೆದು ಇದೇ ತಿಂಗಳಲ್ಲಿ ಸಂಚಾರಕ್ಕೆ ತೆರೆದು ಕೊಡುವ ಸಿದ್ದತೆಯಲ್ಲಿದ್ದಾರೆ. ಸಂಚಾರ ಆರಂಭಗೊAಡರೆ ದಿನಿನಿತ್ಯ ವಾಹನಗಳ ದಟ್ಟಣೆಯ ಸಮಸ್ಯೆಯಿಂದ ಮುಕ್ತಿಹೊಂದಬಹುದು.
ಉಪ್ಪಳ ಪೇಟೆಯ ಕಾಮಗಾರಿ ಹಿನ್ನೆಲೆ, ಸಂಚಾರದ ಅವ್ಯವಸ್ಥೆಯಿಂದಾಗಿ ಮಂಗಳೂರು-ಕಾಸರಗೋಡು, ಮಂಗಳೂರು- ತಲಪಾಡಿ-ಕಾಸರಗೋಡು ಸಂಚರಿಸುವ ಸರಕಾರಿ ಹಾಗೂ ಖಾಸಗಿ ಬಸ್‌ಗಳು ಉಪ್ಪಳ ನಿಲ್ದಾಣದೊಳಗೆ ಪ್ರವೇಶಿಸದೆ ನೇರವಾಗಿ ಹೋಗುವುದರಿಂದ ನಿಲ್ದಾಣದೊಳಗೆ ಇರುವ ವ್ಯಾಪಾರಿಗಳು ವ್ಯಾಪಾರ ಇಲ್ಲದೆ ಸಂಕಷ್ಟಕ್ಕೀಡಾಗಿದ್ದು, ತಲಪಾಡಿ, ಮಂಗಳೂರು ಭಾಗದಿಂದ ಕಾಸರಗೋಡು ಭಾಗಕ್ಕೆ ತೆರಳುವ ಬಸ್‌ಗಳನ್ನು ನಿಲ್ದಾಣದೊಳಗೆ ಪ್ರವೇಶಿಸುವಂತೆ ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ. ಅಲ್ಲದೆ ಬಸ್ ನಿಲ್ದಾಣದೊಳಗೆ ಖಾಸಗಿ ವಾಹನಗಳನ್ನು ನಿಲುಗಡೆ ಗೊಳಿಸುವುದರಿಂದ ಬಸ್‌ಗಳ ನಿಲುಗಡೆ ಹಾಗೂ ತಿರುಗಿಸಲು ಸ್ಥಳವಕಾಶ ಇಲ್ಲದೆ ಸಮಸ್ಯೆಗೀಡಾಗುತ್ತಿರುವುದಾಗಿ ಬಸ್ ನಿಬ್ಬಂದಿಗಳು ತಿಳಿಸಿದ್ದಾರೆ. ಸಂಬAಧಪಟ್ಟ ಕಾನೂನು ಪಾಲಕರು ಹಾಗೂ ಪಂಚಾಯತ್ ಅಧಿಕೃತರು ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.