ಮಧೂರು ಕ್ಷೇತ್ರ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಸಮರ್ಪಣೆ ಪ್ರಾದೇಶಿಕ ಸಮಿತಿಗಳ ಪೂರ್ವಭಾವಿ ಸಭೆ
ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಬ್ರಹ್ಮಕಲ ಶೋತ್ಸವ ಮತ್ತು ಮೂಡಪ್ಪ ಸೇವೆಯ ಪ್ರಯುಕ್ತ ಕಾಸರಗೋಡು ನಗರದ 22 ಪ್ರಾದೇಶಿಕ ಸಮಿತಿಯ ವತಿಯಿಂದ ಮಾರ್ಚ್ 29 ರಂದು ಸಂಜೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಸಾಂಸ್ಕೃತಿಕ ವೈಭವದೊಂದಿಗೆ ಹೊರಡುವ ಹೊರೆ ಕಾಣಿಕೆ ಸಮರ್ಪಣೆಯ ಪೂರ್ವಭಾವಿ ಸಭೆ ಕಾಸರಗೋಡು ನಗರ ಸಮಿತಿಯ ಅಧ್ಯಕ್ಷ ಮೂಡುಮನೆ ಬಾಲಕೃಷ್ಣ ನಾಯ್ಕ್ರ ಅಧ್ಯಕ್ಷತೆಯಲ್ಲಿ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜರಗಿತು. ನಗರ ಸಮಿತಿ ಉಪಾಧ್ಯಕ್ಷ, ಎಸ್.ವಿ.ಇ. ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಕೇಂದ್ರ ಸಮಿತಿ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್ ಅಣಂಗೂರು, ಗಣೇಶ್ ಅಮೈ, ಹರೀಶ್ ಕೋಟೆಕಣಿ, ಶ್ರೀಕಾಂತ್ ಕಾಸರಗೋಡು, ವಿವಿಧ ಪ್ರಾದೇಶಿಕ ಸಮಿತಿಯ ಪದಾಧಿಕಾರಿ ಗಳಾದ ತುಕರಾಮ ಆಚಾರ್ಯ ಕೆರೆಮನೆ, ತಾರಾನಾಥ್ ನಾಯ್ಕ್ ಬೀರಂತಬೈಲ್, ಕುಸುಮಾಕರ ಎನ್.ಆರ್.ಎ. ಕೋಟೆಕಣಿ, ದಿವ್ಯಾ ಸಂದೀಪ್ ಹೊನ್ನೆಮೂಲೆ, ಸ್ವಾತಿ ನವೀನ್ ಕೊರಕ್ಕೋಡು, ಮನೋಜ್ ಕಡಪ್ಪುರ, ಬಾಲಕೃಷ್ಣ ನೆಲ್ಲಿಕುಂಜೆ, ದಯಾನಂದ ಪೂಜಾರಿ ಕರಂದಕ್ಕಾಡ್, ನವೀನ್ ಕುಮಾರ್ ಅಶೋಕ ನಗರ, ಗಣೇಶ್ ನಾಯ್ಕ್ ಕೇಳುಗುಡ್ಡೆ, ಸದಸ್ಯರಾದ ಶ್ರೀಲತಾ ಟೀಚರ್, ಕೆ.ಎನ್. ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್, ಶ್ರಿನಿವಾಸ ಹೊಳ್ಳ, ವಸಂತ್ ಕೆರೆಮನೆ, ಸವಿತಾ ಕಿಶೋರ್, ಶ್ವೇತಾ ಗೋಕುಲ್ ಭಾಗವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ನೆಲ್ಲಿಕುಂಜೆ ಕೇಂದ್ರ ಸಮಿತಿ ಕಾರ್ಯದರ್ಶಿ ಮಹೇಶ್ ಮಾಳವಿಕಾ ವಂದಿಸಿದರು.