ಶೇಷವನ: ಸುತ್ತು ಗೋಪುರಕ್ಕೆ ಶಿಲಾನ್ಯಾಸ
ಕೂಡ್ಲು: ಶೇಷವನ ಶ್ರಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ತೆಂಕು ಭಾಗದ ಸುತ್ತು ಗೋಪುರಕ್ಕೆ ಅರವತ್ ನಾರಾಯಣ ತಂತ್ರಿ ಶಿಲಾನ್ಯಾಸ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಾಯ ಕಾರಂತ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಉದ್ಘಾಟಿಸಿ ದೇವಸ್ಥಾನಗಳಲ್ಲಿ ಸುತ್ತು ಗೋಪುರಗಳ ಪ್ರಾಧಾನ್ಯತೆಗಳನ್ನು ವಿವರಿಸಿದರು. ಶೇಷವನ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಅನುವಂಶಿಕ ಮೊಕ್ತೇಸರ ಸದಾಶಿವ, ಟ್ರಸ್ಟ್ ಕಾರ್ಯದರ್ಶಿ ಗೋಪಾಲಕೃಷ್ಣ ಪಾಯಿಚಲ್, ವಾರ್ಡ್ ಸದಸ್ಯ ಸಂಪತ್ ಪೆರ್ನಡ್ಕ, ಆಶಾ ಉಪಾಧ್ಯಾಯ, ಶೇಷವನ ಮಹಿಳಾ ಸಂಘದ ಕಾರ್ಯದರ್ಶಿ ಪ್ರಮೀಳಾ , ಯುವಕ ಸಂಘದ ಅಧ್ಯಕ್ಷ ಸನತ್ ಕೂಡ್ಲು ಉಪಸ್ಥಿತರಿದ್ದರು. ಸುರೇಶ ಮಣಿಯಾಣಿ ಸ್ವಾಗತಿಸಿ, ಪ್ರಕಾಶ ಶೆಟ್ಟಿ ವಂದಿಸಿದರು. ಯುವಕ ಸಂಘದ ಕಾರ್ಯದರ್ಶಿ ರಾಹುಲ್ ಪಾಯಿಚ್ಚಲ್ ನಿರೂಪಿಸಿದರು.