ಬೋಬಿ ಚೆಮ್ಮನ್ನೂರ್ ಇಂಟರ್‌ನ್ಯಾಶನಲ್ ಜ್ಯುವೆಲ್ಲರ್ಸ್‌ನ ಕಾಸರಗೋಡು ಶೋರೂಂ ಉದ್ಘಾಟನೆ

ಕಾಸರಗೋಡು: 162 ವರ್ಷದ ವಿಶ್ವಾಸನೀಯ ಪರಂಪರೆಯಿರುವ ಬೋಬಿ ಚೆಮ್ಮನ್ನೂರ್ ಇಂಟರ್‌ನ್ಯಾಶ ನಲ್ ಜ್ಯುವೆಲ್ಲರ್ಸ್‌ನ  ಹೊಸ ಶೋರೂಂ ಕಾಸರಗೋಡಿನಲ್ಲಿ ಕಾರ್ಯಾ ರಂಭಗೊಂಡಿದೆ. 812 ಕಿಲೋ ಮೀಟರ್ ರನ್ ಯೂನಿಕ್ ವರ್ಲ್ಡ್ ರೆಕಾರ್ಡ್ ಹೋಲ್ಡರ್, ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪಡೆದ ಬೋಚೆ, ಸಿನಿಮಾ ನಟಿ ಅಮಲಾ ಪೋಲ್, ಸೋಶ್ಯಲ್ ಮೀಡಿಯಾ ತಾರೆ ಡೋಳಿ ಚಾಯ್‌ವಾಲ ಎಂಬಿವರು ಜಂಟಿಯಾಗಿ ಶೋರೂಂ ಉದ್ಘಾಟಿಸಿ ದರು. ಆರೋಗ್ಯ ಸಮಸ್ಯೆಗಳಿಂದ ಹಾಗೂ ಆರ್ಥಿಕವಾಗಿ ತೊಂದರೆ ಹೊಂದಿದ ಖ್ಯಾತ ಸಿನಿಮಾ ನಟಿ ಚಾಳಮೇರಿ ಯನ್ನು ಉದ್ಘಾಟನಾ ವೇಳೆಯಲ್ಲೇ ಬೋಚೆ ೫ ಲಕ್ಷ ರೂ. ನೀಡಿ ಗೌರವಿಸಿದರು.

ಡೈಮಂಡ್ ಆಭರಣಗಳ ಮೊದಲ ಮಾರಾಟವನ್ನು ಶಾಸಕ ಎನ್.ಎ. ನೆಲ್ಲಿಕುನ್ನು, ಚಿನ್ನಾಭರಣಗಳ ಮೊದಲ ಮಾರಾಟ ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ನಿರ್ವಹಿಸಿದರು. ಸಿಯಾನ, ಲಲಿತ ಎಂ, ಶ್ರೀಲತ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಅಧ್ಯಕ್ಷ ಕೆ. ಅಹಮ್ಮದ್ ಶರೀಫ್, ಗೋಲ್ಡ್ ಅಸೋಸಿಯೇಶನ್ ಅಧ್ಯಕ್ಷ ಕರೀಂ, ಸಾಂಸಿಬಿನ್, ಅನ್ನಾ ಬೇಬಿ, ವಿ.ಕೆ. ಶ್ರೀರಾಮನ್ ಶುಭ ಕೋರಿದರು. ಅನಿಲ್ ಸಿ.ಪಿ. ಸ್ವಾಗತಿಸಿ, ಜೋಜಿ ಎಂ.ಜೆ. ವಂದಿಸಿದರು. ಉದ್ಘಾಟನಾ ಸಂದರ್ಭದಲ್ಲಿ ಕಾಸರಗೋಡಿನ ಆಯ್ದ ಬಡವರಾದ ರೋಗಿಗಳಿಗೆ ಬೋಚೆ ಫ್ಯಾನ್ಸ್ ಚಾರಿಟೇಬಲ್ ಟ್ರಸ್ಟ್ ನೀಡುವ ಧನಸಹಾಯ ವಿತರಿಸಲಾಯಿತು.

ಹಲವಾರು ಆಫರ್‌ಗಳು, ಬಹುಮಾನಗಳು ಉದ್ಘಾಟನೆಯಂಗ ವಾಗಿ ಗ್ರಾಹಕರಿಗೆ ಏರ್ಪಡಿಸಲಾಗಿದೆ. ಎಚ್‌ಯುಐಡಿ ಮೊಹರು ಇರುವ 916 ಚಿನ್ನಾಭರಣಗಳಿಗೂ, ಡೈಮಂಡ್ ಆಭರಣಗಳಿಗೂ ಮಜೂರಿಯಲ್ಲಿ 50 ಶೇಕಡಾವರೆಗೆ ರಿಯಾಯಿತಿ, ಡೈಮಂಡ್, ಅನ್‌ಕಟ್, ಫ್ರಶ್ಯಸ್ ಆಭರಣಗಳನ್ನು ಖರೀದಿಸುವವರಿಂದ ಡ್ರಾ ಮೂಲಕ ದಿನಂಪ್ರತಿ ಓರ್ವ ಅದೃಷ್ಟಶಾಲಿಗೆ ಡೈಮಂಡ್ ರಿಂಗ್ ಬಹುಮಾನ ನೀಡಲಾಗುವುದು. ಈ ಆಫರ್ 10 ದಿನಕ್ಕೆ ಸೀಮಿತ. ಚಿನ್ನ ಬೆಲೆಯೇರಿಕೆಯಿಂದ ಸಂರಕ್ಷಣೆ ಪಡೆಯಲು ಅಡ್ವಾನ್ಸ್ ಬುಕ್ಕಿಂಗ್ ಆಫರ್, ವಿವಾಹ ಖರೀದಿಗಳಿಗೆ ಪ್ರತ್ಯೇಕ ಸೌಲಭ್ಯ ಎಂಬಿವು ಲಭ್ಯವಿದೆ ಎಂದು ಜ್ಯುವೆಲ್ಲರಿಯ ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉದ್ಘಾಟನೆ ಕಾರ್ಯಕ್ರಮಕ್ಕೆ ತಲುಪಿದವರಿಂದ ಡ್ರಾ ಮೂಲಕ ಆಯ್ಕೆಯಾದ ೫ ಮಂದಿಗೆ ಡೈಮಂಡ್ ರಿಂಗ್ ಬಹುಮಾನವಾಗಿ ನೀಡಲಾಯಿತು.

Leave a Reply

Your email address will not be published. Required fields are marked *

You cannot copy content of this page