ಜ್ಯುವೆಲ್ಲರಿ ನೌಕರೆ ನಾಪತ್ತೆ: ಪೊಲೀಸರಿಂದ ತನಿಖೆ

ಕಾಸರಗೋಡು: ಕಾಸರ ಗೋಡಿನ ಜ್ಯುವೆಲ್ಲರಿಯೊಂದರ ನೌಕರೆಯಾದ ಯುವತಿ ನಾಪತ್ತೆ ಯಾಗಿರುವುದಾಗಿ ದೂರಲಾಗಿದೆ. ಪರವನಡ್ಕ ಮಣಿಯಂಗಾನ ನಿವಾಸಿ ಎಂ. ಶರಣ್ಯ (35) ನಾಪತ್ತೆಯಾದ ಯುವತಿ. ಪತಿ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ. ಎಂದಿನಂತೆ ಬುಧವಾರ ಬೆಳಿಗ್ಗೆ ಈಕೆ ಜ್ಯುವೆಲ್ಲರಿಗೆ ಕೆಲಸಕ್ಕೆಂದು ತೆರಳಿದ್ದರು. ವಾಪ ಸ್ಸಾಗದ ಹಿನ್ನೆಲೆಯಲ್ಲಿ  ಹುಡುಕಾಟ ನಡೆಸಿದಾಗ 5 ಗಂಟೆಗೆ ಜ್ಯುವೆಲ್ಲರಿ ಯಿಂದ ಕೆಲಸ ಮುಗಿಸಿ ತೆರಳಿರು ವುದಾಗಿ ಮಾಹಿತಿ ಲಭಿಸಿತ್ತು. ಆದರೆ ರಾತ್ರಿಯಾದರೂ ಮನೆಗೆ ತಲುಪದ ಹಿನ್ನೆಲೆಯಲ್ಲಿ ದೂರು ನೀಡಲಾಗಿದ್ದು, ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೂರು ಮಕ್ಕಳ ತಾಯಿಯಾದ ಶರಣ್ಯಳ ಪತ್ತೆಗಾಗಿ ಹುಡುಕಾಟ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page