ಯುಡಿಎಫ್ ಸರಕಾರದ ಚೊಚ್ಚಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ: ಕಾಸರಗೋಡಿನ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್

ತಿರುವನಂತಪುರ: ಹತ್ತು ವರ್ಷಗಳ ಬಳಿಕ ಪ್ರಚಂಡ ಬಹುಮತದೊಂದಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಿದ ಯುಡಿಎಫ್ ಸರಕಾರದ ಚೊಚ್ಚಲ ಬಜೆಟ್‌ನ್ನು ಹಣಕಾಸು ಖಾತೆಯ ಹೊಣೆಗಾರಿಕೆಯನ್ನು ಹೊಂದಿರುವ ಮುಖ್ಯಮಂತ್ರಿ ವಿ.ಡಿ. ಸತೀಶನ್ ಇಂದು ವಿಧಾನಸಭೆಯಲ್ಲಿ ಮಂಡಿಸಿದರು.  ರಾಜ್ಯದಲ್ಲಿ  ಅತೀವ ಹಿಂದುಳಿದಿರುವ ಕಾಸರಗೋಡು, ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಜ್ಯಾರಿಗೊಳಿಸಲಾಗುವುದು.

ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಅರ್ಹರಾದ ಎಲ್ಲಾ ಸವಲತ್ತುಗಳನ್ನ್ನು ಜ್ಯಾರಿಗೊಳಿಸಲಾಗುವುದು ಮಾತ್ರವಲ್ಲದೆ ಎಂಡೋಸಲ್ಫಾನ್ ಸಂತ್ರಸ್ತರನ್ನು ಸರಕಾರವೇ   ವಹಿಸಿಕೊಳ್ಳಲಿದೆ. ಕಾಸರಗೋಡಿನ ವೈದ್ಯಕೀಯ ಕಾಲೇಜು ನಿರ್ಮಾಣ ಕೆಲಸಗಳನ್ನು ಶೀಘ್ರ ಪೂರ್ತೀಕರಿಸಲಾಗುವುದೆಂದೂ  ಬಜೆಟ್ ಮೂಲಕ ಮುಖ್ಯಮಂತ್ರಿ ಘೋಷಿಸಿದ್ದಾರೆ.

ಉದ್ಯೋಗ ಖಾತರಿ ಯೋಜನೆಗೆ 1,422 ಕೋಟಿ ರೂ., ಕ್ರೀಡೆ ಮತ್ತು ಯುವಜನ ವಲಯಕ್ಕೆ 175.77 ಕೋಟಿ ರೂ., ಹೈನುಗಾರಿಕಾ ಅಭಿವೃದ್ಧಿ ವಲಯಕ್ಕೆ 102 ಕೋಟಿ ರೂ.ವನ್ನು ಬಜೆಟ್‌ನಲ್ಲಿ  ಮೀಸಲಿರಿಸಲಾಗಿದೆ. ಸಮುದ್ರ, ಜಲಸಾರಿಗೆ, ರಸ್ತೆ ಮತ್ತು ರೈಲ್ವೇಯನ್ನು ಪರಸ್ಪರ ಜೋಡಣೆ ನಡೆಸಿ  ಮಿಷನ್ ಸಮುದ್ರ ಎಂಬ ಯೋಜನೆಗೆ ರೂಪು ನೀಡಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ 400 ಕೋಟಿ ರೂ. ಮೀಸಲಿರಿಸಲಾಗಿದೆ.

ಕೇರಳವನ್ನು ಏಷ್ಯಾದ ಪ್ರಧಾನ ಏವಿಯೇಶನ್ ಹಬ್‌ಆಗಿ ಬದಲಾ ಯಿಸಲು 200 ಕೋಟಿ ರೂ., ಬಡ ವಿಭಾಗವನ್ನು ಕೇರಳ ಮುಂಜಾಗ್ರತಾ ಮಿಶನ್ ಹಾಗೂ ವಯೋಜನ ಇಲಾಖೆಗಾಗಿ ತಲಾ 10 ಕೋಟಿ ರೂಯನಂತೆ ಮೀಸಲಿರಿಸಲಾಗಿದೆ.

ಉಮ್ಮನ್ ಚಾಂಡಿ ಆರೋಗ್ಯ ವಿಮೆ ಯೋಜನೆ ಜ್ಯಾರಿಗೊಳಿ ಸಲಾಗುವುದು. ಇದರಂತೆ ಪ್ರತೀ ಕುಟುಂಬಕ್ಕೆ ವರ್ಷಕ್ಕೆ ತಲಾ 25  ಲಕ್ಷ ರೂ.ಗಳ ವಿಮೆ ಸೌಕರ್ಯ ಏರ್ಪಡಿಸಲಾಗುವುದು. ಲೋಕೋಪಯೋಗಿ ಇಲಾಖೆಗೆ 5259 ಕೋಟಿ ರೂ, ಆಪರೇಶನ್ ತೂಫಾನ್‌ಗೆ 10 ಕೋಟಿ ರೂ., ಪ್ರಿಯದರ್ಶಿನಿ ಉಚಿತ ಪ್ರಯಾಣಕ್ಕಾಗಿ 600 ಕೋಟಿ ರೂ, ಕ್ರೀಡಾ ಯೋಜನೆಗಾಗಿ ಮಲಬಾರ್‌ನಲ್ಲಿ ಫುಟ್ಭಾಲ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ೫೦ ಕೋಟಿ ರೂ. ಮೀಸಲಿರಿಸಲಾಗಿದೆ.

ಖಾಸಗಿ ಬಸ್‌ಗಳ ಮೂರು ತಿಂಗಳ ತೆರಿಗೆಯಲ್ಲಿ ಶೇ. 50ರಷ್ಟು ಹಾಗೂ ಟೂರಿಸ್ಟ್ ಬಸ್‌ಗಳ ಮೂರು ತಿಂಗಳ  ತೆರಿಗೆಯಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಾಗುವುದೆಂದು  ಬಜೆಟ್‌ನಲ್ಲಿ ಹೇಳಲಾಗಿದೆ.

RELATED NEWS

You cannot copy contents of this page