ಉಪ್ಪಳ ಗ್ರಾಮ ಕಚೇರಿಗೆ ವಿಜಿಲೆನ್ಸ್ ದಾಳಿ: ಭೂಮಿ ತೆರಿಗೆ ಪಾವತಿಗೆ ತಲುಪಿದ ವ್ಯಕ್ತಿಯಿಂದ 5000 ರೂ. ಲಂಚ ಪಡೆಯುತ್ತಿದ್ದ ನೌಕರನ ಬಂಧನ

ಉಪ್ಪಳ: 5000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಕಚೇರಿ ನೌಕರನನ್ನು ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಕೋಡಿಬೈಲು ನಿವಾಸಿಯೂ ಉಪ್ಪಳ ಗ್ರೂಪ್ ವಿಲ್ಲೇಜ್ ಆಫೀಸ್‌ನ ಕಾಶ್ವಲ್ ಸ್ವೀಪರ್ ಆಗಿರುವ ಕೆ. ಶಿವಪ್ರಸಾದ್ (42) ಸೆರೆಗೀಡಾದ ವ್ಯಕ್ತಿ.  ಈತನನ್ನು ಕಾಸರಗೋಡು ವಿಜಿಲೆನ್ಸ್ ಆಂಡ್ ಆಂಟಿ ಕರಪ್ಶನ್ ಬ್ಯೂರೋ ಡಿವೈಎಸ್ಪಿ ಉಣ್ಣಿಕೃಷ್ಣನ್ ಹಾಗೂ ತಂಡ ಬಂಧಿಸಿದೆ. ನಿನ್ನೆ ಬೆಳಿಗ್ಗೆ ಉಪ್ಪಳ ಗ್ರಾಮ ಕಚೇರಿಯಲ್ಲಿ ವಿಜಿಲೆನ್ಸ್ ತಪಾಸಣೆ ನಡೆಸಿದೆ. ಕ್ಷೇತ್ರವೊಂದಕ್ಕೆ ಭಕ್ತರೊಬ್ಬರು ಉಚಿತವಾಗಿ ನೀಡಿದ ಭೂಮಿಯ ತೆರಿಗೆ ಕಮಿಟಿ ಹೆಸರಲ್ಲಿ ಪಾವತಿಸಲು ಬಂದ ವ್ಯಕ್ತಿಯಿಂದ ಲಂಚ ಪಡೆಯುತ್ತಿರುವಾಗ ಶಿವಪ್ರಸಾದ್ ನನ್ನು ಬಂಧಿಸಲಾಗಿದೆ.

ದೂರುಗಾರ ಒಂದು ತಿಂಗಳ ಹಿಂದೆ ತೆರಿಗೆಯನ್ನು ಕಮಿಟಿಯ ಹೆಸರಿಗೆ ಬದಲಾಯಿಸಲು ಗ್ರಾಮ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಸ್ಥಳದ ತೆರಿಗೆ ರಶೀದಿ ಈ ಹಿಂದಿನ ಮಾಲಕನ ಹೆಸರಲ್ಲಿರುವುದರಿಂದ ತುಂಬಾ ಕೆಲಸವಿದೆಯೆಂದೂ ತಕ್ಷಣ ಪಾವತಿಸಲು ಸಾಧ್ಯವಿಲ್ಲವೆಂದು ಸ್ಪೆಷಲ್ ವಿಲ್ಲೇಜ್ ಆಫೀಸರ್ ಅರ್ಜಿದಾರರಲ್ಲಿ ತಿಳಿಸಿದ್ದರು. ಇದರಿಂದ ಹೊರಗೆ ಹೋಗಲು ಸಿದ್ಧನಾದ ಅರ್ಜಿದಾರನನ್ನು ಸ್ವೀಪರ್ ಶಿವಪ್ರಸಾದ್ ಭೇಟಿಯಾಗಿದ್ದು, ಸ್ಪೆಷಲ್ ವಿಲ್ಲೇಜ್ ಆಫೀಸರ್‌ರಲ್ಲಿ ಹೇಳಿ ಕೂಡಲೇ ಸರಿಪಡಿಸಿಕೊಡುವುದಾಗಿಯೂ ಅದಕ್ಕೆ ಖರ್ಚಿದೆಯೆಂದು ತಿಳಿಸಿದ್ದಾನೆ.  ಅನಂತರ ಒಂದು ವಾರ ಕಳೆದು ಅರ್ಜಿದಾರ ಗ್ರಾಮ ಕಚೇರಿಗೆ ತಲುಪಿ ಶಿವಪ್ರಸಾದ್‌ನನ್ನು ಭೇಟಿಯಾಗಿದ್ದು, ಜೂನ್ 11ರಂದು ಸ್ಪೆಷಲ್ ವಿಲ್ಲೇಜ್ ಆಫೀಸರ್ ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು.1500 ರೂಪಾಯಿ ಪಡೆದ ಬಳಿಕ ಇನ್ನು 5000 ರೂ. ಲಂಚವಾಗಿ ನೀಡಬೇಕೆಂದು ತಿಳಿಸಿ ಮರಳಿರುವುದಾಗಿ ಹೇಳಲಾಗುತ್ತಿದೆ. ನಿನ್ನೆ ಅರ್ಜಿದಾರ ಮತ್ತೆ  ಗ್ರಾಮ ಕಚೇರಿಗೆ ತಲುಪಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆದರೆ ಅವರ ಅರ್ಜಿ ಮೇಲೆ ಯಾವುದೇ ಕ್ರಮ ಉಂಟಾಗಲಿಲ್ಲ.ಈ ವೇಳೆ 5000 ರೂಪಾಯಿ ಲಂಚ ನೀಡಬೇಕೆಂದು ಶಿವಪ್ರಸಾದ್ ದೂರು ಗಾರನಿಗೆ ಫೋನ್ ಕರೆ ಮಾಡಿ ತಿಳಿಸಿದ್ದನು. ಈ ವಿಷಯವನ್ನು ದೂರುಗಾರ ವಿಜಿಲೆನ್ಸ್‌ಗೆ ತಿಳಿಸಿದ್ದಾರೆ. ಇದರಂತೆ ನಿನ್ನೆ ಬೆಳಿಗ್ಗೆ ವಿಜಿಲೆನ್ಸ್ ತಂಡ ಗ್ರಾಮ ಕಚೇರಿಗೆ ತಲುಪಿತ್ತು. ಹಣ ಲಂಚ ಪಡೆಯುತ್ತಿದ್ದ ವೇಳೆ ಶಿವಪ್ರಸಾದ್‌ನನ್ನು ವಿಜಿಲೆನ್ಸ್ ಅಧಿಕಾರಿಗಳು ಕೈಯ್ಯಾರೆ ಸೆರೆಹಿಡಿ ದಿದ್ದಾರೆ. ವಿಜಿಲೆನ್ಸ್ ತಂಡದಲ್ಲಿ ಇನ್‌ಸ್ಪೆಕ್ಟರ್ ಪಿ. ನಾರಾಯಣನ್, ಎಸ್‌ಐ ರಾಧಾಕೃಷ್ಣನ್, ರಿಜೇಶ್, ಸಂತೋಷ್, ಜಯಚಂದ್ರನ್, ರಮೇಶನ್, ಸಜೇಶ್, ವಿಜೇಶ್, ಶ್ರೀಜಿತ್, ರತೀಶ್, ಬಾಬು,  ಲಿಜಿನ್ ಎಂಬಿವರಿದ್ದರು.

RELATED NEWS

You cannot copy contents of this page