ನೆಲ್ಯಡ್ಕ ಶ್ರೀ ಮೂಕಾಂಬಿಕಾ ಭಜನಾ ಮಂದಿರ: ಪ್ರತಿಷ್ಠೆ ಮುಂದೂಡಿಕೆ

ನಾರಂಪಾಡಿ: ನೆಲ್ಯಡ್ಕ ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ದೇವಿಯ ಪ್ರತಿಷ್ಠೆ ನಾಳೆ ನಡೆಸಲು ತೀರ್ಮಾನಿಸಲಾಗಿದ್ದು, ಆದರೆ ಕಾರ ಣಾಂತರಗಳಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. 2013 ರಲ್ಲಿ ಪ್ರಶ್ನೆ ಚಿಂತನೆ ನಡೆಸಿ ಮಂದಿರವನ್ನು ಜೀರ್ಣೋದ್ಧಾರಗೊಳಿಸಿ ದೇವಿಯ ಛಾಯಾರೂಪವನ್ನು ಬದಲಿಸಿ ಪ್ರತಿಷ್ಠಾ ಪಿಸಬೇಕೆಂದು ಕಂಡು ಬಂದ ಹಿನ್ನೆಲೆ ಯಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊ ಳ್ಳಲಾಗಿತ್ತು. ಜೀರ್ಣೋದ್ಧಾರ ಸಮಿತಿ ರೂಪೀಕರಿಸಿ ಮಂದಿರದ ಕಾಮಗಾರಿ ಯನ್ನು ನಡೆಸಲಾಗುತ್ತಿದ್ದು, ಆದರೆ ಕಾಮ ಗಾರಿ ಸಂಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಷ್ಠೆ ಕಾರ್ಯಕ್ರಮವನ್ನು ಮುಂದೂಡ ಲಾಗಿದೆ ಎಂದು ಸಮಿತಿ ತಿಳಿಸಿದೆ.

You cannot copy contents of this page