ವರ್ಕಾಡಿಯಲ್ಲಿ ಕಾಡುಹಂದಿಗಳ ನಿಗೂಢ ಸಾವು: ಎರಡು ವಾರಗಳಲ್ಲಿ 10ರಷ್ಟು ಹಂದಿಗಳು ವಿವಿಧೆಡೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ವರ್ಕಾಡಿ:  ಪಾವೂರು ಪೊಯ್ಯೆ ಹಾಗೂ  ಪರಿಸರ ಪ್ರದೇಶಗಳಲ್ಲಿ ಕಾಡುಹಂದಿಗಳು ನಿಗೂಢವಾಗಿ ಸಾವಿಗೀಡಾಗುತ್ತಿರುವುದಾಗಿ ತಿಳಿದುಬಂದಿದೆ. ಕಳೆದ ಎರಡು ವಾರಗಳಿಂದ 10ರಷ್ಟು ಹಂದಿಗಳು ಸಾವಿಗೀಡಾಗಿವೆ. ಇಂದು ಬೆಳಿಗ್ಗೆ ಭಾರೀ ಗಾತ್ರದ ಕಾಡುಹಂದಿ ಪಾವೂರಿನ ರಸ್ತೆ ಬದಿ ಸತ್ತು ಬಿದ್ದಿರುವುದು ಕಂಡುಬಂದಿದೆ.  ಈ ಮೊದಲು ಸಾವಿಗೀಡಾದ ಹಂದಿಗಳು ರಸ್ತೆ ಹಾಗೂ ಗುಡ್ಡೆ ಪ್ರದೇಶಗಳಲ್ಲಿ ಪತ್ತೆಯಾಗಿದ್ದವು. ಅವುಗಳನ್ನು ನಾಗರಿಕರು ಹೂತು ಹಾಕಿದ್ದಾರೆ. ಅಲ್ಲದೆ ಈ ಬಗ್ಗೆ ನಾಗರಿಕರು ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಹೇಳಲಾಗುತ್ತಿದೆ.  ಇದೇ ವೇಳೆ ಹಂದಿಗಳು ವ್ಯಾಪಕವಾಗಿ ಸಾವಿಗೀಡಾಗುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

You cannot copy contents of this page