ಉಪ್ಪಳ: ಬಾಕ್ರಬೈಲಿನಲ್ಲಿ ಯುವಕ ಗುಂಡೇಟು ತಗಲಿ ಗಾಯಗೊಂಡ ಘಟನೆಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಪೊಲೀಸರ ನೇತೃತ್ವದಲ್ಲಿ ಶ್ವಾನದಳ, ಫಾರೆನ್ಸಿಕ್ ತಜ್ಞರು ನಿನ್ನೆ ಸ್ಥಳಕ್ಕೆ ತಲುಪಿ ತಪಾಸಣೆ ನಡೆಸಿದ್ದಾರೆ. ಬಾಕ್ರಬೈಲಿನ ಕಾಡಿನಲ್ಲಿ ನಡೆಸಿದ ಶೋಧ ವೇಳೆ ಗುಂಡು ಹಾರಿಸಲು ಬಳಸಿದ ಮತ್ತೊಂದು ಉಪಕರಣ ಪತ್ತೆಯಾಗಿದೆ. ಇಲಿಗಳನ್ನು ಕೊಲ್ಲಲು ಬಳಸುವ ಉಪಕರಣ ಬಳಸಿ ಬಂದೂಕಿನ ರೀತಿಯಲ್ಲಿ ನಿರ್ಮಿಸಿದ ಉಪ ಕರಣ ಇದಾಗಿದೆ. ಕಾಡು ಹಂದಿಯನ್ನು ಕೊಲ್ಲಲು ಯಾರೋ ಇರಿಸಿದ ಉಪಕರಣ ಇದಾಗಿರಬಹು ದೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ಇ. ಅನೂಬ್ ಕುಮಾರ್ ನೇತೃತ್ವದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ.
ಇದೇ ವೇಳೆ ಗುಂಡೇಟು ತಗಲಿ ಗಾಯಗೊಂಡ ಬಾಕ್ರಬೈಲು ನಿವಾಸಿ ಸವಾದ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊನ್ನೆ ರಾತ್ರಿ 10.30ರ ವೇಳೆ ಬಾಕ್ರಬೈಲಿನ ಗುಡ್ಡೆ ಪ್ರದೇಶದಲ್ಲಿ ಬೆಳಕು ಕಾಣಿಸಿತ್ತೆನ್ನಲಾಗಿದ. ಅದೇನು ಎಂದು ನೋಡಲು ಸವಾದ್ ಸಹಿತ ನಾಲ್ಕು ಮಂದಿ ಅಲ್ಲಿಗೆ ತೆರಳಿದ್ದರು. ಈ ವೇಳೆ ಉಪಕರಣದಿಂದ ಗುಂಡು ಹಾರಿ ದ್ದು ಅದ ಸವಾದ್‌ರಿಗೆ ತಾಗಿದೆಯೆನ್ನ ಲಾಗಿದೆ. ಗುಡ್ಡೆ ಪ್ರದೇಶದಲ್ಲಿ ಈ ಉಪ ಕರಣ ಇರಿಸಿದವರು ಯಾರೆಂದು ತಿಳಿದು ಬಂದಿಲ್ಲ. ಅವರ ಪತ್ತೆಗಾಗಿ ತನಿಖೆ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.






