ಮೇ 19ರಂದು ಸಚಿವೆ ಚಿಂಜುರಾಣಿ ಜಿಲ್ಲೆಯಲ್ಲಿ

ಕಾಸರಗೋಡು: ರಾಜ್ಯ ಪಶು ಸಂಗೋಪನಾ ಖಾತೆ ಸಚಿವೆ ಜೆ. ಚಿಂಜುರಾಣಿಯವರು ಮೇ 19ರಂದು ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಂದು ಬೆಳಿಗ್ಗೆ 10 ಗಂಟೆಗೆ ಇಡೆಯಿಂಕ್ಕೋಡಿನಲ್ಲಿ ನಡೆಯುವ ಹೈನುಗಾರಿಕಾ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಚಿವರು ಕಟ್ಟಡದ ಉದ್ಘಾಟನೆಯನ್ನು ನೆರವೇರಿಸುವರು.

ಮಧ್ಯಾಹ್ನ 12 ಗಂಟೆಗೆ ನೀಲೇಶ್ವರ ಎಲ್‌ಎಂಟಿಸಿ ಕಟ್ಟಡ, 2 ಗಂಟೆಗೆ ಬೇಡಡ್ಕ ಆಡು ಫಾಂಗೂ ಭೇಟಿ ನೀಡುವರು. ಅಪರಾಹ್ನ 3 ಗಂಟೆಗೆ ಮುಳಿಯಾರಿನಲ್ಲಿ ಹೊಸದಾಗಿ ಆರಂಭಿಸಲಾದ ಆನಿಮಲ್ ಬರ್ತ್ ಕಂಟ್ರೋಲ್ (ಎಬಿಸಿ) ಕೇಂದ್ರದ ಉದ್ಘಾಟನೆ ನೆರವೇರಿಸುವರು. ನಂತರ ಸಂಜೆ 4ಕ್ಕೆ ಬೇಳದಲ್ಲಿರುವ ಜಾನುವಾರು ಫಾಂ ಅಡ್ಮಿಸ್ಟ್ರೇಟಿವ್ ಕಟ್ಟಡವನ್ನು ಸಚಿವರು ಉದ್ಘಾಟಿಸುವರು.

RELATED NEWS

You cannot copy contents of this page