ರಾಜ್ಯದಲ್ಲಿ ಇಂದು ರಾತ್ರಿಯಿಂದ ಟ್ರೋಲಿಂಗ್ ನಿಷೇಧ
ಕಾಸರಗೋಡು: ಮಳೆಗಾಲ ಮೀನುಗಳ ಸಂತಾನೋತ್ಪತ್ತಿ ಋತುವಾಗಿರುವ ಹಿನ್ನೆಲೆಯಲ್ಲಿ ಮತ್ಸ್ಯ ಸಂಪತ್ತನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತೀ ವರ್ಷ ಸಮುದ್ರದಲ್ಲಿ ಮೀನುಗಾರಿಕೆಗೆ (ಟ್ರೋಲಿಂಗ್) ನಿಷೇಧ ಹೇರಲಾಗುವುದು. ಇದರಂತೆ ಇಂದು ರಾತ್ರಿ 12 ಗಂಟೆಗೆ ಜಾರಿಗೆ ಬರಲಿದೆ. ಇದು ಮುಂದಿನ ೫೨ ದಿನಗಳ ತನಕ ಮುಂದುವರಿಯಲಿದೆ.
ಪರಂಪರಾಗತವಾದ ರೀತಿಯಲ್ಲಿ ನಾಡ ದೋಣಿಯಲ್ಲಿ ಮೀನುಗಾರಿಕೆ ನಡೆಸುವ ಬೆಸ್ತರಿಗೆ ಈ ನಿಷೇಧ ಅನ್ವಯಗೊಳಿಸಲಾಗಿಲ್ಲ. ಆದರೆ ಇತರ ರೀತಿಯ ಮೀನುಗಾರಿಕೆಗೆ ಇದನ್ನು ಕಡ್ಡಾಯವಾಗಿ ಅನ್ವಯಗೊಳಿಸಲಾಗಿದೆ.