ತುಂಡಾಗಿ ಬಿದ್ದ ವಯರ್ನಿಂದ ಶಾಕ್ ತಗಲಿ 5 ಹಸುಗಳು ಸಾವು
ಹೊಸದುರ್ಗ: ತುಂಡಾಗಿ ಬಿದ್ದ ವಯರ್ನಿಂದ ಶಾಕ್ ತಗಲಿ 5 ಹಸುಗಳು ಸಾವಿಗೀಡಾಗಿವೆ. ಇಂದು ಬೆಳಿಗ್ಗೆ ಹಾಲು ಕರೆಯಲೆಂದು ಕೊಟ್ಟಿಗೆಗೆ ಹೋದ ಮಹಿಳೆಗೂ ಶಾಕ್ ತಗಲಿದೆ. ಚಪ್ಪಾರಪ್ಪಡವ್, ಕಣಾರಂವಯಲ್ನ ಹೈನುಗಾರಿಕೆ ಕೃಷಿಕರಾದ ದಾಮೋದರನ್- ಶ್ಯಾಮಳ ದಂಪತಿಯ ೫ ಹಸುಗಳು ಸಾವಿಗೀಡಾಗಿವೆ. ಇಂದು ಮುಂಜಾನೆ ಶ್ಯಾಮಳ ಹಾಲು ಕರೆಯಲೆಂದು ಕೊಟ್ಟಿಗೆಗೆ ತೆರಳಿದ್ದರು.
ಹಟ್ಟಿಯ ಬಲ್ಬ್ನ ಸ್ವಿಚ್ ಅದುಮಿದಾಗ ಶ್ಯಾಮಳಾರಿಗೆ ಶಾಕ್ ತಗಲಿದೆ. ಬಳಿಕ ನೋಡಿದಾಗ ಹಟ್ಟಿಯಲ್ಲಿ ಅಳವಡಿಸಿದ್ದ ಬಲ್ಬ್ಗೆ ಸಂಪರ್ಕ ಕಲ್ಪಿಸಿದ ವಯರ್ ತುಂಡಾಗಿ ಬಿದ್ದಿರುವುದು ಹಾಗೂ ಹಸುಗಳು ಸಾವಿಗೀಡಾಗಿರುವುದು ಕಂಡು ಬಂದಿದೆ. ೩ ಲಕ್ಷ ರೂಪಾಯಿಗಳ ನಷ್ಟ ಅಂದಾಜಿಸಲಾಗಿದೆ.