ಚಿನ್ನದ ಬೆಲೆಯಲ್ಲಿ ಕುಸಿತ
ಕೊಚ್ಚಿ: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿದ್ದ ಚಿನ್ನದ ದರ ಕುಸಿದು ಆಭರಣಪ್ರಿಯ ರಿಗೆ ಸಂತಸ ನೀಡಿದೆ. ಇರಾನ್ ಚರ್ಚೆಗೆ ಸಿದ್ಧ ಎಂದು ಜಿಸಿಸಿ ದೇಶಗಳ ಮೂಲಕ ಅಮೆರಿಕಕ್ಕೆ ತಿಳಿಸಿರುವುದು ಚಿನ್ನದ ಬೆಲೆಯಲ್ಲಿ ಕಡಿತ ಉಂಟಾಗಲು ಕಾರಣವೆನ್ನಲಾಗಿದೆ. ಇಂದು ಪವನ್ಗೆ 840 ರೂ. ಕುಸಿದು 73600 ರೂ. ಬೆಲೆಯಾಗಿದೆ. ಗ್ರಾಂಗೆ 105 ರೂ. ಕಡಿಮೆಯಾಗಿದೆ. ಶನಿವಾರ ಚಿನ್ನದ ಬೆಲೆಯಲ್ಲಿ ಪವನ್ಗೆ 200 ರೂ. ಹೆಚ್ಚಳವಾಗಿತ್ತು. ಸತತ ನಾಲ್ಕು ದಿನದಿಂದ ಚಿನ್ನದ ಬೆಲೆ ಹೆಚ್ಚಾಗಿತ್ತು.