ಮುಗು ಬ್ಯಾಂಕ್ ಆವರಣಗೋಡೆ ಕುಸಿತ; ಕಟ್ಟಡ ಭೀತಿಯಲ್ಲಿ

ನೀರ್ಚಾಲು: ಮುಂಡಿತ್ತಡ್ಕ ಸಮೀಪದಲ್ಲಿ ಕಾರ್ಯಾಚರಿಸು ತ್ತಿರುವ ಮುಗು ಸೇವಾ ಸಹಕಾರ ಬ್ಯಾಂಕ್‌ನ ಕೇಂದ್ರ ಕಚೇರಿಯ ಆವರಣಗೋಡೆ ನಿನ್ನೆ ಸುರಿದ ಧಾರಾಕಾರ ಮಳೆಗೆ ಕುಸಿದಿದೆ. ಇದರಿಂದ ಬ್ಯಾಂಕ್ ಕಟ್ಟಡ ಆತಂಕ ಸೃಷ್ಟಿಯಾಗಿದೆ.   ಆವರಣಗೋಡೆ ಕುಸಿದು ಕಲ್ಲು ಮಣ್ಣು ರಸ್ತೆಗೆ ಬಿದ್ದಿತ್ತು. ಇದರಿಂದ ಅಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಎದುರಾಯಿತು.  ಅವುಗಳನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರ ಯೋಗ್ಯ ಗೊಳಿಸಲಾಗಿದೆ.

You cannot copy contents of this page