ಪಾಲಕ್ಕಾಡ್‌ನಲ್ಲಿ ಬಿಜೆಪಿ ಮುಖಂಡ ಕಾಂಗ್ರೆಸ್‌ಗೆ

ಪಾಲಕ್ಕಾಡ್: ಪಾಲಕ್ಕಾಡ್‌ನ ಬಿಜೆಪಿ ಮುಖಂಡ ಕಾಂಗ್ರೆಸ್‌ಗೆ ಸೇರಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಮುಹಮ್ಮದ್ ಕಾಂಗ್ರೆಸ್‌ಗೆ ಸೇರಿದ್ದಾರೆ. ಪಾಲಕ್ಕಾಡ್ ಡಿಸಿಸಿ ಅಧ್ಯಕ್ಷ ಎ. ತಂಗಪ್ಪನ್ ಮೊಹಮ್ಮದ್‌ರನ್ನು ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು. 1986ರಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತ ನಾಗಿದ್ದು, ಪಕ್ಷದಿಂದ ನೊಂದು ಕಾಂಗ್ರೆಸ್‌ಗೆ ಸೇರಿರುವುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಮೊದಲು ಪಾಲಕ್ಕಾಡ್ ಕೋಟಾಯಿಯಲ್ಲಿ ಕಾಂಗ್ರೆಸ್ ಮಂಡಲ ಅಧ್ಯಕ್ಷ, 30ರಷ್ಟು ಕಾರ್ಯಕರ್ತರು, ಮುಖಂಡರು ಸಿಪಿಎಂಗೆ ಸೇರಿದ್ದರು. ಡಿಸಿಸಿ ನಾಯಕತ್ವ ಸಹಿತ ಟೀಕಿಸಿರುವ ಪಕ್ಷಾಂತರ ಕಾಂಗ್ರೆಸ್‌ಗೆ ತಿರುಗೇಟಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಮುಖಂಡ ಈಗ ಕಾಂಗ್ರೆಸ್‌ಗೆ ಸೇರಿದ್ದಾರೆ.

You cannot copy contents of this page