ಮಂತ್ರವಾದ ಚಿಕಿತ್ಸೆ ಹೆಸರಲ್ಲಿ 16ರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳಕ್ಕೆತ್ನ: 72ರ ಮಂತ್ರವಾದಿ ಸೆರೆ
ಕಾಸರಗೋಡು: ಅಸೌಖ್ಯದಿಂದ ಬಳಲುತ್ತಿದ್ದ ೧೬ರ ಹರೆಯದ ಬಾಲಕಿಗೆ ಮಂತ್ರವಾದ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಲೆತ್ನಿಸಿದ ದೂರಿನಂತೆ ಆಕೆಯ ನಿಕಟ ಸಂಬಂಧಿಕನಾಗಿರುವ 72ರ ಹರೆಯದ ಮಂತ್ರವಾದಿ ವಿರುದ್ಧ ವಿದ್ಯಾನಗರ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಗೊಳ ಪಟ್ಟ ಪ್ರದೇಶದ ಬಾಲಕಿ ನೀಡಿದ ದೂರಿನಂತೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಸೌಖ್ಯದಿಂದ ಬಳಲುತ್ತಿದ್ದ ಬಾಲಕಿಯನ್ನು ಆರೋಪಿ ಮಂತ್ರವಾದ ಚಿಕಿತ್ಸೆ ಹೆಸರಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆತನ ಮನೆಗೆ ಕರೆತಂದು ಲೈಂಗಿಕ ಕಿರುಕುಳ ನೀಡಲೆತ್ನಿ ಸಿರು ವುದಾಗಿ ಆರೋಪಿಸಲಾಗಿದೆ. 2023ರಲ್ಲಿ ಈ ಘಟನೆ ನಡೆದಿತ್ತು. ಆ ವಿಷಯವನ್ನು ಬಾಲಕಿ ಇತ್ತೀಚೆಗೆ ಶಾಲೆಯಲ್ಲಿ ಕೌನ್ಸಿಲಿಂಗ್ ವೇಳೆ ಬಯಲುಪಡಿಸಿದ್ದಾಳೆ.