ತಂಬಾಕು ಉತ್ಪನ್ನ ಸಹಿತ ಇಬ್ಬರ ಸೆರೆ  

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬೆರಿಪದವು ಭಾಗದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ತೀವ್ರಗೊಂ ಡಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇವರ ಕೈಯಿಂದ ಒಟ್ಟು 150 ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ. ಬೆರಿಪದವು ಕೊಜಪ್ಪೆ ನಿವಾಸಿಗಳಾದ  ಗಂಗಾಧರನ್ (34) ದಿನಕರನ್ ಕೆ (36) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಎಸ್‌ಐಗಳಾದ ಉಮೇಶ್ ಹಾಗೂ ರತೀಶ್ ನಡೆಸಿದ ಕಾರ್ಯಾಚರಣೆ ವೇಳೆ ಪಾನ್ ಮಸಾಲೆ ಪತ್ತೆಯಾಗಿದೆ.  ನಿನ್ನೆ ಬೆಳಿಗ್ಗೆ 11.15ರ ವೇಳೆ ಬೆರಿಪದವು ಬಸ್ ನಿಲ್ದಾಣ ಬಳಿ ನಿಂತಿದ್ದ ಗಂಗಾಧರನ್ ಕೈಯಲ್ಲಿದ್ದ ಚೀಲವನ್ನು ತಪಾಸಣೆ ನಡೆಸಿದಾಗ 80 ಪ್ಯಾಕೆಟ್ ಪಾನ್ ಮಸಾಲೆ ಪತ್ತೆಯಾಗಿದೆ. ರಾತ್ರಿ 7.30ಕ್ಕೆ ಅದೇ ಸ್ಥಳದಲ್ಲಿ ದಿನಕರ್ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದಿದ್ದು, ಆತನನ್ನು ತಪಾಸಣೆ ನಡೆಸಿದಾಗ  70ಪ್ಯಾಕೆಟ್ ಪಾನ್ ಮಸಾಲೆ ಪತ್ತೆಯಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page