ಬಿಜೆಪಿ ರಾಷ್ಟ್ರೀಯ ವಕ್ತಾರ ಅನಿಲ್ ಆಂಟನಿ ವಿರುದ್ಧ ಕೇಸು
ಕಾಸರಗೋಡು: ಕಾಲೇಜು ಬಳಿ ಬಸ್ ನಿಲುಗಡೆಗೊಳಿಸದ ಹೆಸರಲ್ಲಿ ಕುಂಬಳಯಲ್ಲಿ ಕೆಲವು ವಿದ್ಯಾರ್ಥಿನಿ ಯರು ಬಸ್ಸನ್ನು ತಡೆದು ನಿಲ್ಲಿಸಿದ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತೀಯ ಭಾವನೆ ಕೆರಳಿಸುವ ರೀತಿಯ ಸಂದೇಶವನ್ನು ಚಿತ್ರಗಳ ಸಹಿತ ರವಾನಿಸಲಾಗಿದೆಯೆಂದು ಆರೋಪಿಸಿ ನೀಡಲಾದ ದೂರಿನಂತೆ ಬಿಜೆಪಿ ರಾಷ್ಟ್ರೀಯ ವಕ್ತಾರ ಅನಿಲ್ ಆಂಟನಿ ವಿರುದ್ಧ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದರ ಹೊರತಾಗಿ ಆನಂದಿ ನಾಯರ್ ಅಲಿಯಾಸ್ ಆನಂದಿ ಸನಾತನಿ ಎಂಬವರ ವಿರುದ್ಧವೂ ಇದೇ ರೀತಿಯ ಪ್ರಕರಣ ದಾಖಲಿಸಲಾಗಿದೆ. ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ಟಿ. ಸಿದ್ಧಾರ್ಥನ್ ಅನಿಲ್ ಈ ಇಬ್ಬರ ವಿರುದ್ಧ ದೂರು ನೀಡಿದ್ದರು. ಅದರಂತೆ ಸೈಬರ್ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬುರ್ಖಾ ಧರಿಸದೆ ಮಹಿಳೆಯರಿಗೆ ಕೇರಳದಲ್ಲಿ ನೆಮ್ಮದಿಯಿಂದ ಪ್ರಯಾ ಣಿಸಲು ಸಾಧ್ಯವಾಗುತ್ತಿಲ್ಲವೆಂಬ ರೀತಿ ಯಲ್ಲಿ ಪ್ರಚಾರವನ್ನು ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಿಸಲಾಗಿತ್ತು. ಆ ಬಳಿಕ ಅದನ್ನು ತಕ್ಷಣ ಹಿಂತೆಗೆದುಕೊಳ್ಳಲಾಗಿ ತ್ತೆಂದು ದೂರಿನಲ್ಲಿ ತಿಳಿಸಲಾಗಿತ್ತು.