ಸ್ಕೂಟರ್ನಲ್ಲಿ ಮದ್ಯ ಸಾಗಾಟ: ತಡೆದ ಅಬಕಾರಿ ಅಧಿಕಾರಿಗಳಿಗೆ ಹಲ್ಲೆಗೆ ಯತ್ನಿಸಿ ಆರೋಪಿ ಪರಾರಿ
ಕಾಸರಗೋಡು: ಸ್ಕೂಟರ್ನಲ್ಲಿ ಕರ್ನಾಟಕ ಮದ್ಯ ಸಹಿತ ತಲುಪಿದ ಆರೋಪಿ ಅಬಕಾರಿ ಅಧಿಕಾರಿಗಳಿಗೆ ಹಲ್ಲೆಗೈಯ್ಯಲೆತ್ನಿಸಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ದೂರಲಾಗಿದೆ.
ಚೆಂಗಳ ವಿಲ್ಲೇಜ್ನ ನಾಲ್ಕನೇ ಮೈಲು ತೈವಳಪ್ಪ್ ವೀಡ್ನ ಸುಧೀರ್ ಐ (೪೫) ಎಂಬಾತ ಪರಾಕ್ರಮ ಮೆರೆದಿರುವುದಿರುವುದಾಗಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಅಡಿಶನಲ್ ಎಕ್ಸೈಸ್ ಇನ್ಸ್ಪೆಕ್ಟರ್ ಜೋಸೆಫ್ ಐ. ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಸಂಜೆ ಚೆರ್ಕಳದಲ್ಲಿ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ ಆ ದಾರಿಯಲ್ಲಿ ಬಂದ ಸ್ಕೂಟರ್ನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಲೆತ್ನಿಸಿದಾಗ ಅದರಲ್ಲಿದ್ದ ಸುಧೀರ್ ಪರಾಕ್ರಮ ತೋರಿಸಿದ್ದಾನೆ. ಬಳಿಕ ಸ್ಕೂಟರ್ನಲ್ಲಿದ್ದ ೪.೩೨ ಲೀಟರ್ ಮದ್ಯವನ್ನು ನೆಲಕ್ಕೆ ಹಾಕಿ ಬಳಿಕ ಚಾಕು ತೋರಿಸಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಬಳಿಕ ಆತನನ್ನು ಬಂಧಿಸಲು ಯತ್ನಿಸಿದರಾದರೂ ಆತ ಪರಾರಿಯಾಗಿದ್ದಾನೆಂದು ದೂರಲಾಗಿದೆ. ಸುಧೀರ್ ಈಗಾಗಲೇ ವಾರಂಟ್ ಆರೋಪಿಯಾಗಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಮದ್ಯ ಸಾಗಾಟ ನಡೆಸಿದ ಆರೋಪದಂತೆ ಸುಧೀರ್ ವಿರುದ್ಧ ಅಬಕಾರಿ ಅಧಿಕಾರಿಗಳು ಕೇಸು ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಇಐ ಜೋಸೆಫ್, ಪಿ.ಒ. ರಂಜಿತ್, ಐ.ಬಿ.ಪಿ.ಒ ಬಿಜೋಯ್, ಸಿಇಒ ಕಣ್ಣನ್ ಕುಂಞಿ ಮೊದಲಾದವರಿದ್ದರು.