ತವರು ಮನೆಯಲ್ಲಿದ್ದ ಯುವತಿಯ ಇರಿದು ಕೊಲೆ: ಆರೋಪಿ ಪತಿಗಾಗಿ ಶೋಧ

ಪಾಲಕ್ಕಾಡ್: ಪತಿಯೊಂದಿಗೆ ಸಿಟ್ಟುಗೊಂಡು ತವರು ಮನೆಗೆ ತೆರಳಿದ ಯುವತಿಯನ್ನು ಪತಿ ಇರಿದು ಕೊಲೆಗೈದ ಘಟನೆ ಪಾಲಕ್ಕಾಡ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಪಾಲಕ್ಕಾಡ್ ನಲ್ಲೇಪ್ಪಿಳ್ಳಿ ಎಂಬಲ್ಲಿನ ಊರ್ಮಿಳ (೩೨) ಎಂಬಾಕೆ ಕೊಲೆಗೀಡಾದ ಯುವತಿ.  ಊರ್ಮಿಳಾ ಹಾಗೂ ಪತಿ ಸಜೇಶ್ ಮಧ್ಯೆ ದೀರ್ಘ ಕಾಲದಿಂದ ಸಮಸ್ಯೆ ಸೃಷ್ಟಿಯಾಗಿದೆ. ಇದರಿಂದ ಊರ್ಮಿಳಾ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ಇಂದು ಬೆಳಿಗ್ಗೆ ಅಲ್ಲಿಗೆ ತಲುಪಿದ ಸಜೇಶ್ ಗಲಾಟೆಯೆಬ್ಬಿ ಸಿದ್ದಾನೆ.

ಬಳಿಕ  ಊರ್ಮಿಳಾ ಕೆಲಸ ಸ್ಥಳಕ್ಕೆ ತೆರಳಿದ್ದಾಳೆ. ಈ ವೇಳೆ  ದಾರಿ ಮಧ್ಯೆ ಸಜೇಶ್ ಆಕೆಗೆ ಇರಿದಿದ್ದಾನೆ. ಘಟನೆ ತಿಳಿದ ಸ್ಥಳೀಯರು ಕೂಡಲೇ ಯುವತಿಯನ್ನು ಚಿಟ್ಟೂರಿನ ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ಸಾವು  ಸಂಭವಿಸಿದೆ. ಘಟನೆ ಬಳಿಕ ತಲೆಮರೆಸಿಕೊಂಡ ಆರೋಪಿ ಪತಿಗಾಗಿ ಶೋಧ ನಡೆಸಲಾಗುತ್ತಿದೆ.

RELATED NEWS

You cannot copy contents of this page