ಶಾಲಾ ವಿದ್ಯಾರ್ಥಿನಿಗೆ ಹಲವರಿಂದ ಕಿರುಕುಳ ೧೫ ಮಂದಿ ವಿರುದ್ಧ ಪೋಕ್ಸೋ ಕೇಸು ದಾಖಲು

ಕಾಸರಗೋಡು: ಶಾಲಾ ವಿದ್ಯಾರ್ಥಿನಿಯಾದ ಹದಿನೈದರ ಹರೆಯದ ಬಾಲಕಿ ಹಲವರಿಂದ ಕಿರುಕುಳಕ್ಕೊಳಗಾಗಿರುವುದಾಗಿ ದೂರಲಾಗಿದೆ.

ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ   ಬಾಲಕಿ ಹಲವರಿಂದ ಕಿರುಕುಳಕ್ಕೊಳಗಾಗಿದ್ದಳೆನ್ನಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬೇಡಗಂ ಪೊಲೀಸರು ಇದುವರೆಗೆ ಒಟ್ಟು ೧೫ ಪೋಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ.

ಇತ್ತೀಚೆಗೆ ಶಾಲೆಯಲ್ಲಿ ನಡೆದ ಕೌನ್ಸೆಲಿಂಗ್ ವೇಳೆ ಬಾಲಕಿ  ಕಿರುಕುಳ ಕ್ಕೊಳಗಾದ ವಿಷಯ ಬಹಿರಂಗಗೊಂ ಡಿದೆ. ಈ ಬಗ್ಗೆ ಚೈಲ್ಡ್ ಲೈನ್ ಅಧಿಕಾರಿಗಳು ನೀಡಿದ ದೂರಿನಂತೆ ಬೇಡಗಂ ಪೊಲೀಸರು  ಆರಂಭದಲ್ಲಿ ೮ ಕೇಸುಗಳನ್ನು ದಾಖಲಿಸಿಕೊಂ ಡಿದ್ದರು.  ಈ ಸಂಬಂಧ ಆರೋಪಿ ಗಳನ್ನು ಪೋಕ್ಸೋ ಪ್ರಕಾರ ಬಂಧಿಸಿದ್ದು ಅವರಿಗೆ ರಿಮಾಂಡ್ ವಿಧಿಸಲಾಗಿದೆ. ಇದರ ಬೆನ್ನಲ್ಲೇ ಇತರ ೭ ಮಂದಿ ಕಿರುಕುಳ ನೀಡಿರುವ ವಿಷಯ ಬಹಿರಂಗಗೊಂಡಿದೆ. ಇದರಂತೆ ಪೊಲೀಸರು ಮೊನ್ನೆ ಮೂರು, ನಿನ್ನೆ ೪ ಕೇಸುಗಳನ್ನು ದಾಖಲಿಸಿಕೊಂ ಡಿದ್ದಾರೆ. ಇದೇ ವೇಳೆ  ಕೇಸು ದಾಖಲಿಸಿದ ವಿಷಯ ತಿಳಿದೊಡನೆ ಆರೋಪಿಗಳು ಪರಾರಿಯಾಗಿರುವು ದಾಗಿ ಸೂಚನೆಯಿದೆ. ಇದೇ ವೇಳೆ ಬಾಲಕಿ ಹಲವರಿಂದ ಕಿರುಕುಳಕ್ಕೊಳಗಾದ ಘಟನೆಯ ಬಗ್ಗೆ ಬೇಡಗಂ ಪೊಲೀಸರು ದಾಖಲಿಸಿಕೊಂಡ ತನಿಖೆಯನ್ನು ಸ್ಪೆಷಲ್ ಮೊಬೈಲ್ ಸ್ಕ್ವಾಡ್‌ಗೆ ಹಸ್ತಾಂತರಿಸಲಾಗುವುದೆಂಬ ಸೂಚನೆಯಿದೆ.

RELATED NEWS

You cannot copy contents of this page