ಮಧುಮೇಹ ದಿನ: ವೈದ್ಯರುಗಳಿಂದ ತಿಳುವಳಿಕಾ ನಡಿಗೆ
ಕಾಸರಗೋಡು: ವಿಶ್ವ ಮಧುಮೇಹ ದಿನದ ಅಂಗವಾಗಿ ಜನರಲ್ಲಿ ಅರಿವು, ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಾಸರಗೋಡಿನಲ್ಲಿ ಇಂದು ಬೆಳಿಗ್ಗೆ ವೈದ್ಯರುಗಳ ನೇತೃತ್ವದಲ್ಲಿ ನಡಿಗೆ ನಡೆಯಿತು. ಐಎಂಎ ಕಾಸರಗೋಡು ಘಟಕ, ಐಎಂಎ ವನಿತಾ ವಿಂಗ್, ರೋಟರಿ ಕ್ಲಬ್ ಕಾಸರಗೋಡು, ಡಿಯಾಲೈಫ್, ಐಎಪಿ ಎಂಬಿವುಗಳ ಸಂಯುಕ್ತಾಶ್ರಯದಲ್ಲಿ ನಡೆದ ನಡಿಗೆ ಬ್ಯಾಂಕ್ ರೋಡ್ನಲ್ಲಿರುವ ರೋಟರಿ ಕ್ಲಬ್ ಬಳಿಯಿಂದ ಆರಂಭಗೊಂಡು ನಗರದಲ್ಲಿ ಪ್ರದಕ್ಷಿಣೆ ಬಂದು ಬಳಿಕ ರೋಟರಿ ಕ್ಲಬ್ ಸಮೀಪದಲ್ಲಿ ಸಮಾಪ್ತಿಗೊಂಡಿತು. ಐಎಂಎ ಅಧ್ಯಕ್ಷ ಡಾ| ಜಿತೇಂದ್ರ ರೈ, ರೋಟರಿ ಕ್ಲಬ್ ಅಧ್ಯಕ್ಷ ಗೌತಂ ಭಕ್ತ, ಡಿಯಾ ಲೈಫ್ ವೈದ್ಯ ಡಾ| ಮೊಯ್ದೀನ್ ಕುಂಞಿ, ಡಾ| ನಾರಾಯಣ ನಾಯ್ಕ, ಡಾ| ಗಣೇಶ್ ಮಯ್ಯ, ಡಾ| ಖಾಸಿಂ, ಡಾ| ಪ್ರಜ್ಯೋತ್ ಶೆಟ್ಟಿ, ಡಾ| ಗೋಪಾಲಕೃಷ್ಣ ಭಟ್, ಡಾ| ಜ್ಯೋತಿ, ಡಾ| ರೇಖಾಲತ, ಡಾ| ತೇಜಸ್ವಿ, ಡಾ| ನೌಫಲ್, ಗೋಕುಲ್ಚಂದ್ರ ಭಟ್, ರೋಟರಿ ಕ್ಲಬ್ನ ಎಂ.ಟಿ. ದಿನೇಶ್, ಮುರಳೀಧರ ಕಾಮತ್, ಸಿ.ಎ. ವಿಶಾಲ್ ಕುಮಾರ್, ನಿಹಾಲ್ ಜೋಸ್ ಮೊದಲಾದವರು ಭಾಗವಹಿಸಿದರು.